ಪಾಲಕ್ಕಾಡ್​ ದೇವಸ್ಥಾನದ ಮೆರವಣಿಗೆಯಲ್ಲಿ ಮದವೇರಿದ ಆನೆ ದಾಳಿ.. ಅದೃಷ್ಟವಶಾತ್​ ಪಾರಾದ ಮಾವುತ - ಈಟಿವಿ ಭಾರತ ಕನ್ನಡ

🎬 Watch Now: Feature Video

thumbnail

By

Published : Dec 29, 2022, 12:03 PM IST

Updated : Feb 3, 2023, 8:37 PM IST

ಪಾಲಕ್ಕಾಡ್​(ಕೇರಳ): ಪಾಲಕ್ಕಾಡ್​ ಜಿಲ್ಲೆಯ ದೇವಸ್ಥಾನದ ಉತ್ಸವವೊಂದರಲ್ಲಿ ಮದವೇರಿದ ಆನೆ ದಾಳಿ ನಡೆಸಿದೆ. ಈ ವೇಳೆ, ಮಾವುತ ಗಾಯಗೊಂಡಿದ್ದು, 6 ಬೈಕ್​ಗಳು ಮತ್ತು ದೇವಸ್ಥಾನದ ಛಾವಣಿಯನ್ನು ಧ್ವಂಸ ಮಾಡಿದೆ. ಬುಧವಾರ ಬೆಳಗ್ಗೆ ಕಿಷ್ಕಂಚೇರಿ ತಿರುವಾರ ದೇವಸ್ಥಾನದಲ್ಲಿ ನಿರಾಮಲ ಮಹೋತ್ಸವದ ಅಂಗವಾಗಿ ನಡೆಯುತ್ತಿದ್ದ ಮೆರವಣಿಗೆಯಲ್ಲಿ 'ಪುತೂರು ದೇವಿನಂದನ್​' ಎಂಬ ಆನೆಯು ಮತ್ತೊಂದು ಆನೆಯ ಮೇಲೆ ದಾಳಿ ನಡೆಸಿದೆ. ಈ ವೇಳೆ ಮೇಲೆ ಕೂತಿದ್ದವರು ತಕ್ಷಣವೇ ಕೆಳಗೆ ಹಾರಿದ್ದಾರೆ. ಮಾವುತ ಗಿರೀಶ್(35) ಕೆಳಗೆ ಜಿಗಿದಾಗ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಆನೆಯನ್ನು ನಿಯಂತ್ರಿಸಲು ಮಾವುತರು ಹರಸಾಹಸಪಟ್ಟಿದ್ದು, ಅಂಕುಶದಿಂದ ತಿವಿದು, ಸಂಕೋಲೆ ಹಾಕಿ ಬಂಧಿಸಿದ್ದಾರೆ.
Last Updated : Feb 3, 2023, 8:37 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.