Elephant stops Bus: ಚಾಮರಾಜನಗರದಲ್ಲಿ ಬಸ್ ತಡೆದು ಕಬ್ಬು ಹುಡುಕಿದ ಆನೆ- ವಿಡಿಯೋ - ಬಸ್ ಅಡ್ಡಹಾಕಿ ಆನೆ
🎬 Watch Now: Feature Video
ಚಾಮರಾಜನಗರ: ಕಬ್ಬಿಗಾಗಿ ಬಸ್ ಅಡ್ಡ ಹಾಕಿದ ಕಾಡಾನೆ ಪ್ರಯಾಣಿಕರನ್ನು ಪೇಚಿಗೆ ಸಿಲುಕಿಸಿದ ಘಟನೆ ಚಾಮರಾಜನಗರ ಗಡಿಭಾಗವಾದ ತಮಿಳುನಾಡಿನ ಅಸನೂರು ಸಮೀಪ ನಡೆದಿದೆ. ಸತ್ಯಮಂಗಲದಿಂದ ಮೈಸೂರಿಗೆ ತೆರಳುತ್ತಿದ್ದ ಬಸ್ ತಡೆದ ಕಾಡಾನೆ ಸೊಂಡಿಲಿನಿಂದ ತಡಕಾಡಿದ ದೃಶ್ಯ ಲಭ್ಯವಾಗಿದೆ.
ಕೊನೆಗೆ ಇದು ಕಬ್ಬು ತುಂಬಿದ ಲಾರಿಯಲ್ಲ ಎಂದು ತಿಳಿದ ಆನೆ ಬಸ್ ಬಿಟ್ಟು ತೆರಳಿತು. ಆನೆ ಅಡ್ಡ ಹಾಕಿ ನಂತರ ದಾರಿ ಬಿಡುತ್ತಿದ್ದಂತೆ ಆತಂಕಕ್ಕೀಡಾಗಿದ್ದ ಪ್ರಯಾಣಿಕರು ನಿಟ್ಟುಸಿರು ಬಿಟ್ಟರು. ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳನ್ನು ತಡೆಯುವ ಆನೆಗಳು ಕಬ್ಬು ತಿನ್ನುವುದು ಸಾಮಾನ್ಯವಾಗಿದೆ. ಲಾರಿ ಚಾಲಕರು ಕಬ್ಬಿನ ಜಲ್ಲೆಗಳನ್ನು ಎಸೆದು ಅಭ್ಯಾಸ ಮಾಡಿರುವುದರಿಂದ ಆನೆಗಳು ವಾಹನಗಳನ್ನು ಅಡ್ಡಹಾಕುವ ಚಾಳಿ ರೂಢಿಸಿಕೊಂಡಿವೆ.
ಆನೆಗೆ ಕಬ್ಬು ನೀಡಿದ ಚಾಲಕನಿಗೆ ₹75 ಸಾವಿರ ದಂಡ: 2022ರ ಡಿಸೆಂಬರ್ನಲ್ಲಿ ಚಾಮರಾಜನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಎದುರು ಬಂದ ಗಜರಾಜನಿಗೆ ಕಬ್ಬು ಕೊಟ್ಟ ಲಾರಿ ಚಾಲಕನಿಗೆ ತಮಿಳುನಾಡು ಅರಣ್ಯ ಇಲಾಖೆ 75 ಸಾವಿರ ರೂ ದಂಡ ಹಾಕಿದ್ದನ್ನು ಇಲ್ಲಿ ನೆನಪಿಸಬಹುದು.
ಇದನ್ನೂ ಓದಿ: ಕಾಡಾನೆ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಪ್ರವಾಸಿಗರಿಗೆ 20 ಸಾವಿರ ದಂಡ ವಿಧಿಸಿದ ಅರಣ್ಯ ಇಲಾಖೆ