ವಾಹನಗಳನ್ನು ಎತ್ತಿ ಬಿಸಾಡಿದ ಒಂಟಿ ಸಲಗ; ಗಜರಾಜನ ರೌದ್ರಾವತಾರಕ್ಕೆ ಬೆಚ್ಚಿಬಿದ್ದ ಜನ

🎬 Watch Now: Feature Video

thumbnail

ಕೇರಳದ ತ್ರಿಶೂರ್​ದ ತ್ರಿಪ್ರಯಾರ್‌ನಲ್ಲಿ ಮದವೇರಿದ ಆನೆಯೊಂದು ಸಿಕ್ಕ-ಸಿಕ್ಕ ವಸ್ತುಗಳು ಮತ್ತು ವಾಹನಗಳ ಮೇಲೆ ದಾಳಿ ಮಾಡಿತ್ತು. ಲಾರಿಯಿಂದ ಕೆಳಗಿಳಿಸುವಾಗ ಪಾರ್ಥಸಾರಥಿ ಎಂಬ ಆನೆ ರೊಚ್ಚಿಗೆದ್ದು ದಾಳಿ ನಡೆಸಿತ್ತು. ನಿನ್ನೆ ಸಂಜೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಆನೆ ದಾಳಿಯಿಂದಾಗಿ ಅಯ್ಯಪ್ಯ ಭಕ್ತರಿಗೆ ಸೇರಿದ್ದ ಕಾರು ಹಾಗೂ ಎರಡು ಟೆಂಪೋ ವಾಹನಗಳನ್ನು ನುಜ್ಜುಗುಜ್ಜಾಗಿವೆ. ಅಷ್ಟೇ ಅಲ್ಲ, ಈ ಮದವೇರಿದ ಒಂಟಿ ಸಲಗ ವ್ಯಾಪಾರಸ್ಥರ ಅಂಗಡಿಯನ್ನೂ ಸಹ ಧ್ವಂಸಗೊಳಿಸಿದೆ. ಈ ಒಂಟಿ ಸಲಗನನ್ನು ಹಿಡಿಯಲು ಸ್ಥಳೀಯರು ಹರಸಾಹಸವೇ ಪಡಬೇಕಾಯಿತು. ಸುಮಾರು ಒಂದು ಗಂಟೆಯ ಬಳಿಕ ಕೊನೆಗೂ ಆನೆಯನ್ನು ಸೆರೆ ಹಿಡಿಯಲಾಯಿತು. 

ಕಳೆದ ಐದು ವರ್ಷದಲ್ಲಿ ಆನೆ ದಾಳಿಗೆ ಸಾವಿರಾರೂ ಜನ ಬಲಿ: 2018-23ರ ಅವಧಿಯಲ್ಲಿ 2,657 ಮಂದಿ ಆನೆ ದಾಳಿಯಿಂದ ಮೃತಪಟ್ಟಿದ್ದಾರೆ ಎಂದು ಕೇಂದ್ರ ಪರಿಸರ ಖಾತೆ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಇತ್ತೀಚೆಗೆ ಈ ಮಾಹಿತಿಯನ್ನು ಹಂಚಿಕೊಂಡಿದ್ದರು. 2018ರಲ್ಲಿ 31 ಮಂದಿ, 2019ರಲ್ಲಿ 49 ಮಂದಿ, 2020ರಲ್ಲಿ 51 ಮಂದಿ, 2021ರಲ್ಲಿ 59 ಮಂದಿ ಹಾಗೂ 2022ರಲ್ಲಿ 103 ಮಂದಿ ಹುಲಿ ದಾಳಿಗೆ ಬಲಿಯಾಗಿದ್ದಾರೆ. ಇನ್ನು ಆನೆ ದಾಳಿಯಿಂದ 2018-19ರಲ್ಲಿ 457, 2019-20ರಲ್ಲಿ 586, 2020-21ರಲ್ಲಿ 464 ಮತ್ತು 2021-22ರಲ್ಲಿ 545 ಮಂದಿ ಸಾವನ್ನಪ್ಪಿದ್ದಾರೆ ಎಂದು ಸಚಿವರು ತಿಳಿಸಿದ್ದರು.

ಓದಿ: ಅರ್ಜುನನಿಗೆ ತ್ರಿಡಿ ಪೇಂಟಿಂಗ್​ ಮೂಲಕ ಮೈಸೂರಿನ ಕಲಾವಿದನಿಂದ ನಮನ- ವಿಡಿಯೋ 

Last Updated : Dec 16, 2023, 3:20 PM IST

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.