30 ಜನ ಪ್ರಯಾಣಿಕರಿದ್ದ ಬಸ್ ಮೇಲೆ ಕಾಡಾನೆ ದಾಳಿ.. ಬಸ್ ಗಾಜು ಪುಡಿಪುಡಿ.. ವಿಡಿಯೋ ವೈರಲ್ - Etv Bharat Kanadda
🎬 Watch Now: Feature Video
ಈರೋಡ್(ತಮಿಳುನಾಡು): ತಮಿಳುನಾಡಿನ ಸರ್ಕಾರಿ ಬಸ್ವೊಂದರ ಮೇಲೆ ಕಾಡಾನೆ ದಾಳಿ ನಡೆಸಿರುವ ಘಟನೆ ಕೇತೆಸಾಲ್ ಎಂಬ ಪ್ರದೇಶದಲ್ಲಿ ನಡೆದಿದೆ. ಕರ್ನಾಟಕದ ಕೊಳ್ಳೇಗಾಲದಿಂದ ತಮಿಳುನಾಡಿನ ಸತ್ಯಮಂಗಳಂಗೆ ತೆರಳುತ್ತಿದ್ದ ಬಸ್ ಮೇಲೆ ಈ ದಾಳಿ ನಡೆಸಿದೆ. ಇನ್ನು ಬಸ್ನಲ್ಲಿ ಸುಮಾರು 30 ಜನರು ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು, ಕಾಡಾನೆ ದಾಳಿಗೆ ಬಸ್ನ ಮುಂಭಾಗದ ಗಾಜ ಒಡೆದು ಹೋಗಿದೆ. ಬಸ್ನಲ್ಲಿದ್ದ ಪ್ರಯಾಣಿಕರು ಕ್ಷಣಕಾಲ ಆತಂಕಗೊಂಡಿದ್ದರು. ಪ್ರಯಾಣಿಕರೊಬ್ಬರು ಘಟನೆಯ ವಿಡಿಯೋವನ್ನು ಮೊಬೈಲ್ನಲ್ಲಿ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಅಟ್ಟಹಾಸ ಮೆರೆದಿದ್ದ ಕಾಡಾನೆ ಅಂತೂ ಸೆರೆ: ಆನೆ ಶಿಬಿರಕ್ಕೆ ಸ್ಥಳಾಂತರ
Last Updated : Feb 3, 2023, 8:38 PM IST