ಬಣ್ಣಾರಿ ಬಳಿ KSRTC ಬಸ್ ಗಾಜು ಪುಡಿ-ಪುಡಿ.. ನನಗೂ ಗ್ಯಾರಂಟಿ ಬೇಕು ಅಂತಾ ಆನೆ!? - tamilunadu bannnari
🎬 Watch Now: Feature Video
ಚಾಮರಾಜನಗರ: ಗ್ಯಾರಂಟಿ ಯೋಜನೆ ಕೇವಲ ನಿಮಗೇ ಏಕೆ ನನಗೂ ಬೇಕು ಎಂಬ ರೀತಿ ಆನೆಯೊಂದು ಕೆಎಸ್ಆರ್ಟಿಸಿ ಬಸ್ಗೆ ಅಡ್ಡಲಾಗಿ ಬಂದು ಗಾಜನ್ನು ಪುಡಿ ಮಾಡಿರುವ ಘಟನೆ ತಮಿಳುನಾಡಿನ ಬಣ್ಣಾರಿ ಬಳಿ ನಡೆದಿದೆ. ಚಾಮರಾಜನಗರದ ಗುಂಡ್ಲುಪೇಟೆ ಡಿಪೋಗೆ ಸೇರಿರುವ ಸಾರಿಗೆ ಸಂಸ್ಥೆ ಬಸ್ ಮೈಸೂರಿನಿಂದ ಕೊಯಮತ್ತೂರಿಗೆ ತೆರಳುವಾಗ ಬಣ್ಣಾರಿ ಬಳಿ ಏಕಾಏಕಿ ರಸ್ತೆ ಮೇಲೆ ಪ್ರತ್ಯಕ್ಷಗೊಂಡ ಹೆಣ್ಣಾನೆ ಸಾರಿಗೆ ಬಸ್ನ ಗಾಜನ್ನು ಒಡೆದು ಹಾಕಿದೆ.
ಈ ಸಂಬಂಧ ಕೆಎಸ್ಆರ್ಟಿಸಿ ಚಾಮರಾಜನಗರ ವಿಭಾಗದ ಡಿಸಿ ಶ್ರೀನಿವಾಸ್ ಪ್ರತಿಕ್ರಿಯೆ ನೀಡಿದ್ದು, ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಯಾವುದೇ ಗಾಯ, ಪ್ರಾಣಾಪಾಯ ಸಂಭವಿಸಿಲ್ಲ. ಬಸ್ನ ಗಾಜು ಒಡೆದು ಹೋಗಿದ್ದರಿಂದ 10 ಸಾವಿರ ರೂ. ನಷ್ಟು ನಷ್ಟವಾಗಿದೆ ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ಗ್ಯಾರಂಟಿಗಳು ಕೇವಲ ಮನುಷ್ಯರಿಗೆ ಏಕೆ ನಮಗೂ ಬೇಕು ಎಂದು ಆನೆ ಗಾಜು ಒಡೆದಿದೆ ಎಂಬ ಅಡಿಬರಹದಲ್ಲಿ ಫೋಟೋವೊಂದು ವೈರಲ್ ಆಗಿದೆ.
ಇದನ್ನೂ ಓದಿ: ಬಾಲಸೋರ್ ರೈಲು ಅಪಘಾತ- ಸಾವಿನ ಸಂಖ್ಯೆ 261ಕ್ಕೆ ಏರಿಕೆ: ಹಳಿಗಳ ಮೇಲೆ ಮರಣ ಮೃದಂಗ, ಸುಮಾರು 50 ಟ್ರೈನ್ಗಳು ರದ್ದು!