ತುಂಡುಡುಗೆ ಧರಿಸಿ ಬಂದ್ರೆ ನೋ ಎಂಟ್ರಿ.. ದೇವಾಲಯಗಳಲ್ಲಿ ಮಹಿಳೆಯರಿಗೆ ಡ್ರೆಸ್ ಕೋಡ್ ಜಾರಿ - ತುಂಡುಡುಗೆ ಧರಿಸಿ ಬಂದ್ರೆ ನೋ ಎಂಟ್ರಿ
🎬 Watch Now: Feature Video
ಹರಿದ್ವಾರ (ಉತ್ತರಾಖಂಡ): ಉತ್ತರಾಖಂಡದ ಮೂರು ಪ್ರಸಿದ್ಧ ದೇವಾಲಯಗಳಲ್ಲಿ ಪಾಶ್ಚಿಮಾತ್ಯ ಉಡುಪುಗಳನ್ನು ನಿಷೇಧಿಸಿ ಮಹಿಳೆಯರು ಮತ್ತು ಬಾಲಕಿಯರಿಗೆ ಡ್ರೆಸ್ ಕೋಡ್ ಜಾರಿಗೊಳಿಸಲಾಗಿದೆ. ಹರಿದ್ವಾರದ ಕಂಖಾಲ್ನಲ್ಲಿರುವ ದಕ್ಷ ಪ್ರಜಾಪತಿ ದೇವಸ್ಥಾನ, ಪೌರಿ ಜಿಲ್ಲೆಯಲ್ಲಿರುವ ನೀಲಕಂಠ ಮಹಾದೇವ ದೇವಸ್ಥಾನ ಮತ್ತು ಡೆಹ್ರಾಡೂನ್ನಲ್ಲಿರುವ ತಪಕೇಶ್ವರ ಮಹಾದೇವ ದೇವಸ್ಥಾನದಲ್ಲಿ ಅಸಭ್ಯ ಡ್ರೆಸ್ಗಳನ್ನು ಧರಿಸಿ ಬಂದವರಿಗೆ ದೇವರ ದರ್ಶನವನ್ನು ನಿಷೇಧಿಸಲಾಗಿದೆ.
ಮಹಿಳೆಯರು ಮತ್ತು ಬಾಲಕಿಯರು ದೇವಸ್ಥಾನಕ್ಕೆ ಬರುವವರಾಗಿದ್ದರೆ ಭಾರತೀಯ ಸಂಸ್ಕೃತಿ ಮತ್ತು ನಾಗರಿಕತೆಯ ಪ್ರಕಾರ ಬಟ್ಟೆ ಧರಿಸಬೇಕು ಎಂದು ದೇವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಿದೆ. ಈ ನಿಯಮಗಳನ್ನು ಪಾಲಿಸಿದ್ದಲ್ಲಿ ಮಾತ್ರ ದೇವಾಲಯಕ್ಕೆ ಪ್ರವೇಶಿಸಲು ಅನುಮತಿ ನೀಡಲಾಗುವುದು ಎಂದು ತಿಳಿಸಿದೆ.
ಈ ಬಗ್ಗೆ ಮಾತನಾಡಿದ ಮಹಾನಿರ್ವಾಣಿ ಅಖಾಡದ ಕಾರ್ಯದರ್ಶಿ ಹಾಗೂ ಅಖಿಲ ಭಾರತೀಯ ಅಖಾಡ ಪರಿಷತ್ತಿನ ಅಧ್ಯಕ್ಷ ಶ್ರೀಮಹಾಂತ ರವೀಂದ್ರ ಪುರಿ, "ದೇವಸ್ಥಾನವು ಮನೋರಂಜನೆಯ ಸ್ಥಳವಲ್ಲ. ದೇವಸ್ಥಾನಕ್ಕೆ ಬರುವ ಮಹಿಳೆಯರು ಮತ್ತು ಬಾಲಕಿಯರು ಕನಿಷ್ಠ 80% ಮೈ ಮುಚ್ಚುವ ಬಟ್ಟೆಗಳನ್ನು ಧರಿಸಿ ಬರಬೇಕು. ದಕ್ಷಿಣ ಭಾರತ ಮತ್ತು ಮಹಾರಾಷ್ಟ್ರದ ದೇವಾಲಯಗಳಲ್ಲಿ ಈಗಾಗಲೇ ಈ ವ್ಯವಸ್ಥೆ ಜಾರಿಯಲ್ಲಿದೆ. ಇಲ್ಲಿಯೂ ಈ ವ್ಯವಸ್ಥೆಯನ್ನು ಜಾರಿಗೊಳಿಸಲು ನಿರ್ಧರಿಸಿದ್ದೇವೆ. ಇದರಿಂದಾಗಿ ದೇವಸ್ಥಾನಕ್ಕೆ ಬರುವ ಇತರೆ ಭಕ್ತರಿಗೆ ಯಾವುದೇ ಮುಜುಗರ ಉಂಟಾಗುವುದಿಲ್ಲ" ಎಂದು ಹೇಳಿದರು.
ಇದನ್ನೂ ಓದಿ: ರಿಲಯನ್ಸ್ ನೇತೃತ್ವದಲ್ಲಿ ಗತವೈಭವ ಮರಳಿ ಪಡೆಯಲಿದೆ 'ಕಾಳಿಘಾಟ್ ದೇವಾಲಯ'