ಭಾರತ್ ಜೋಡೋ ಯಾತ್ರೆ ವಿಸಿಟ್ ನಡುವೆ ಚಿಣ್ಣರೊಟ್ಟಿಗೆ ವಾಲಿಬಾಲ್ ಆಡಿದ ಡಿಕೆಶಿ.. - Etv Bharat Kannada
🎬 Watch Now: Feature Video
ಚಾಮರಾಜನಗರ: ಇದೇ 30 ರಿಂದ ರಾಜ್ಯದಲ್ಲಿ ಆರಂಭಗೊಳ್ಳುವ ಭಾರತ್ ಜೋಡೋ ಯಾತ್ರೆಯ ಮಾರ್ಗವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಇಂದು ಪರಿಶೀಲನೆ ನಡೆಸಿದರು. ಯಾತ್ರೆ ಆರಂಭಗೊಳ್ಳುವ ಗುಂಡ್ಲುಪೇಟೆಯ ಅಂಬೇಡ್ಕರ್ ಭವನ ರಸ್ತೆ, ನಂಜನಗೂಡು ರಸ್ತೆ ಮತ್ತು ಬದನವಾಳು ಖಾದಿ ಕೇಂದ್ರಕ್ಕೆ ಕೈಪಡೆ ನಾಯಕರುಗಳು ಭೇಟಿನೀಡಿ ಭಾರತ್ ಜೋಡೋ ಯಾತ್ರೆಗೆ ಸಜ್ಜುಗೊಳಿಸುತ್ತಿದ್ದಾರೆ. ಈ ನಡುವೆ ನಂಜನಗೂಡು ತಾಲೂಕಿನ ಬದನವಾಳು ಗ್ರಾಮದಲ್ಲಿ ವಾಲಿಬಾಲ್ ಆಡುತ್ತಿದ್ದ ಚಿಣ್ಣರತ್ತ ತೆರಳಿದ ಡಿಕೆಶಿ ಅವರು ಮಕ್ಕಳೊಂದಿಗೆ ವಾಲಿಬಾಲ್ ಆಡಿ ಖುಷಿಪಟ್ಟರು.
Last Updated : Feb 3, 2023, 8:28 PM IST