ನನ್ನ ಮೇಲೆ ಯಾವುದೇ ರೌಡಿಶೀಟರ್ ಕೇಸ್ ಇಲ್ಲ : ಡಿ ಕೆ ಶಿವಕುಮಾರ್ - Etv Bharat Kannada
🎬 Watch Now: Feature Video
ಚಿಕ್ಕಮಗಳೂರು: ತಿಹಾರ್ ಜೈಲಿನಿಂದ ಬಂದವರು ರಾಜ್ಯಾಧ್ಯಕ್ಷ ಹುದ್ದೆಗೆ ಬಡ್ತಿ ಎಂಬ ಬಿಜೆಪಿ ಟ್ವೀಟ್ ವಿಚಾರಕ್ಕೆ ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ನನ್ನ ಮೇಲೆ ಯಾವುದೇ ರೌಡಿಶೀಟರ್ ಕೇಸ್ ಇಲ್ಲ. ಯಡಿಯೂರಪ್ಪ ಜೈಲಿಗೆ ಹೋಗಿ ಬಂದಿದ್ದಾರೆ. ಅಮಿತ್ ಶಾ ಕೂಡ ಜೈಲಿಗೆ ಹೋಗಿ ಬಂದಿದ್ದಾರೆ. ನಾನೂ ಜೈಲಿಗೆ ಹೋಗಿ ಬಂದಿದ್ದೇನೆ. ರಾಜಕೀಯ ಪ್ರೇರಿತವಾಗಿ ನನ್ನನ್ನು ಜೈಲಿಗೆ ಹಾಕಿದ್ದು, ಭ್ರಷ್ಟಾಚಾರ ಮಾಡಿ ಹೋಗಿಲ್ಲ. ಅವರ ತಟ್ಟೆಯಲ್ಲಿ ದೊಡ್ಡ ಹೆಗ್ಗಣ ಬಿದ್ದಿದೆ, ಅದನ್ನ ಮೊದಲು ನೋಡಿಕೊಳ್ಳಲಿ. ಮತದಾನದ ಹಕ್ಕನ್ನೇ ಮಾರಲು ಹೊರಟವರು ಬಿಜೆಪಿಯವರು ಎಂದು ಬಿಜೆಪಿ ವಿರುದ್ಧ ಡಿ ಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
Last Updated : Feb 3, 2023, 8:34 PM IST