ಅನಿವಾರ್ಯ ಕಾರಣಕ್ಕೆ ನಿಂತಿದ್ದ ದೀಪಾವಳಿ: ಗಮನ ಸೆಳೆದ ಹೋರಿ ಓಟ - ಕಾರವಾರ
🎬 Watch Now: Feature Video
ಅನಿವಾರ್ಯ ಕಾರಣಗಳಿಂದ ನಿಂತು ಹೋಗಿದ್ದ ದೀಪಾವಳಿ ಹಬ್ಬವನ್ನು ಜಿಲ್ಲೆಯ ವಿವಿಧೆಡೆ ಒಕ್ಕಲಿಗ ಸಮುದಾಯದವರು ಗುರುವಾರ ಅದ್ದೂರಿಯಾಗಿ ಆಚರಣೆ ಮಾಡಿದರು. ಸಿದ್ದಾಪುರ ತಾಲೂಕಿನ ಅತ್ತಿಸವಲು, ಶಿರಸಿಯ ನೆಬ್ಬೂರು, ಕುಮಟಾ ತಾಲೂಕಿನ ಮೇದಿನಿ, ಬಾಸೊಳ್ಳಿ, ಮೂಡ್ನಳ್ಳಿ ಗ್ರಾಮಗಳಲ್ಲಿ ದೀಪಾವಳಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಮೂರು ದಿನಗಳ ಕಾಲ ಬಲೀಂದ್ರನನ್ನು ತಂದು ಪೂಜೆ ಸಲ್ಲಿಸಿದ ರೈತರು ಗುರುವಾರ ಬಲಿಪಾಢ್ಯದಂದು ಗೋವುಗಳಿಗೆ ಸಿಂಗಾರ, ರೊಟ್ಟಿ, ಪತ್ತೆತೆನೆ ಎಲೆಗಳಿಂದ ಮಾಡಿದ ದಂಡೆಗಳನ್ನು ಕಟ್ಟಿ ವಿಶೇಷ ಪೂಜೆ ಸಲ್ಲಿಸಿದರು. ಹೋರಿಗಳಿಗೆ ಚೌಲೂ, ಬಲೂನ್, ಬಾಸಿಂಗ ಸೇರಿದಂತೆ ಬಣ್ಣದ ಕಾಗದ ಹೂವುಗಳಿಂದ ಶೃಂಗರಿಸಿ ಬೆದರಿಸಲಾಯಿತು. ಊರವರಿಗಾಗಿ ಹಗ್ಗಜಗ್ಗಾಟ ಸ್ಪರ್ಧೆ ಕೂಡ ನಡೆಯಿತು. ಈ ವೇಳೆ ಹೋರಿಗಳ ಓಟ, ಹಾರಾಟ, ರೈತರ ಸಂಭ್ರಮ ನೋಡುಗರ ಗಮನ ಸೆಳೆಯಿತು.
Last Updated : Feb 3, 2023, 8:33 PM IST