ದೇಶಾದ್ಯಂತ ದೀಪಾವಳಿ ಸಂಭ್ರಮ; ಭಾವನಗರದಲ್ಲಿ ಸಿಹಿ ತಿಂಡಿಗಳಿಗೆ ಹೆಚ್ಚು ಬೇಡಿಕೆ
🎬 Watch Now: Feature Video
ಭಾವನಗರ (ಗುಜರಾತ್): ದೇಶಾದ್ಯಂತ ದೀಪಾವಳಿ ಸಂಭ್ರಮ ಜೋರಾಗಿದೆ. ಪಟಾಕಿ, ಹೂವು, ಹಣ್ಣುಗಳ ಮಾರಾಟದಂತೆ ಸಿಹಿ ತಿಂಡಿಗಳಿಗೂ ಹೆಚ್ಚು ಬೇಡಿಕೆಯಿದೆ. ಗುಜರಾತ್ನ ಭಾವನಗರದ ಅಂಗಡಿಗಳಲ್ಲಿ ಸ್ಪೆಷಲ್ ಸ್ವೀಟ್ಗಳು ದೊರಕುತ್ತಿದೆ. ಹಬ್ಬಕ್ಕೆಂದು ಬಗೆ ಬಗೆಯ ಸಿಹಿ ತಿಂಡಿಗಳು ಮಾರಾಟವಾಗುತ್ತಿದೆ. ಬೆಲೆ ಏರಿಕೆಯಾಗಿದ್ದರೂ ಸಹ, ಬೆಲೆಯ ಬಗ್ಗೆ ತಲೆಕೆಡಿಸಿಕೊಳ್ಳದ ಜನರು ಸ್ವೀಟ್ ಖರೀದಿಗೆ ಎಂದು ಅಂಗಡಿಗಳಿಗೆ ಜಮಾಯಿಸುತ್ತಿದ್ದಾರೆ.
ಹಿಂದೂಗಳಿಗೆ ವರ್ಷದ ಬಹುದೊಡ್ಡ ಹಬ್ಬವೇ ದೀಪಾವಳಿ. ಈ ಸಮಯದಲ್ಲಿ ಭಾವನಗರದ ಸ್ವೀಟ್ ಅಂಗಡಿ ವ್ಯಾಪಾರಿಗಳು ಬಗೆ ಬಗೆಯ ಸಿಹಿ ತಿಂಡಿಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ. ಈ ವರ್ಷವೂ ಬರ್ಫಿ, ಘರಿ, ಕಾಜು ಕತ್ರಿ ಸೇರಿದಂತೆ ವೆರೈಟಿ ಸ್ವೀಟ್ಗಳನ್ನು ಮಾರಾಟ ಮಾಡಿದ್ದಾರೆ. ಜನರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸಿದ್ದಾರೆ.
ಅದರಲ್ಲೂ, ಈ ಬಾರಿ ವಿಶೇಷವಾಗಿ ಆರೋಗ್ಯಕರ ಸಿಹಿ ತಿಂಡಿಗಳನ್ನು ಕೂಡ ತಯಾರಿಸಲಾಗಿದೆ. ಕ್ಯಾಶ್ಯೂ ಡ್ರೈ ಫ್ರೂಟ್ ಎಕ್ಸೋಟಿಕಾ, ಕ್ಯಾಶ್ಯೂ ಡ್ರೈ ಫ್ರೂಟ್ ಚಾಕೊಲೇಟ್ ಎಕ್ಸೋಟಿಕಾ, ಚೋಕೋ ಬೈಟ್, ಕ್ಯಾಶ್ಯೂ ಡ್ರೈ ಫ್ರೂಟ್ ಕ್ಯಾಸಟಾ, ಕ್ಯಾಶ್ಯೂ ಡ್ರೈ ಫ್ರೂಟ್ ಅಂಜಿರಪಾತ್ರ ಮುಂತಾದ ಸಿಹಿತಿಂಡಿಗಳನ್ನು ಮಾರಾಟ ಮಾಡಲಾಗಿದೆ.
ಹೆಚ್ಚಿನ ಜನರು ವೆರೈಟಿ ಸ್ವೀಟ್ಗಳನ್ನು ಖರೀದಿಸಿದ್ದಾರೆ. ವಿವಿಧ ಅಂಗಡಿಗಳಲ್ಲಿ ಸಿಹಿ ತಿಂಡಿಗಳ ಬೆಲೆ ಕೆಜಿಗೆ 350 ರೂ.ನಿಂದ 1500 ರೂಪಾಯಿವರೆಗಿದೆ. ಗೋಡಂಬಿ ಮಿಶ್ರಿತ ಮತ್ತಿತರ ಸ್ವೀಟ್ಸ್ ಅನ್ನು 700 ರಿಂದ 1500 ರೂ.ಗೆ ಮಾರಾಟ ಮಾಡುತ್ತಿದ್ದೇವೆ ಎಂದು ಸ್ವೀಟ್ ಅಂಗಡಿ ಮಾಲೀಕ ಪರೇಶಭಾಯ್ ತಿಳಿಸಿದ್ದಾರೆ.
ಇದನ್ನೂ ಓದಿ: ನರಕ ಚತುರ್ದಶಿ ವಿಶೇಷತೆಯೇನು? ಪೂಜೆಯ ವಿಧಾನ ಹೇಗೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ