ಅವೈಜ್ಞಾನಿಕ ಬೆಳೆ ಹಾನಿ ಸರ್ವೆ: ದಿಶಾ ಸಮಿತಿ ಸಭೆಯಲ್ಲಿ ಅಧಿಕಾರಿಗಳಿಗೆ ಕೇಂದ್ರ ಸಚಿವ ಜೋಶಿ ತರಾಟೆ- ವಿಡಿಯೋ
🎬 Watch Now: Feature Video
Published : Aug 28, 2023, 10:31 PM IST
|Updated : Aug 29, 2023, 10:49 AM IST
ಧಾರವಾಡ: ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ದಿಶಾ ಸಮಿತಿ ಸಭೆ ನಡೆಯಿತು. ಈ ವೇಳೆ ತೋಟಗಾರಿಕೆ ಇಲಾಖೆಯಿಂದ ಬೆಳೆಹಾನಿ ಸರ್ವೆ ವಿಚಾರವಾಗಿ ಚರ್ಚೆಯಾಯಿತು. ಈರುಳ್ಳಿ, ಮೆಣಸಿನಕಾಯಿ ಬೆಳೆ ಹಾನಿ ಕುರಿತು ಅವೈಜ್ಞಾನಿಕ ಸರ್ವೆ ಕಾರ್ಯ ನಡೆದಿದೆ. ಬೆಳೆ ಇಲ್ಲ ಎಂದು ವರದಿ ನೀಡಿದ ಬೆನ್ನಲ್ಲೇ, ಚೆನ್ನಾಗಿದೆ ಅಂತಾ ನಮೂದಿಸಿದ್ದಾರೆ ಎಂದು ದಿಶಾ ಸಮಿತಿ ಸದಸ್ಯರು ದೂರಿದರು.
ಸಮಿತಿ ಸದಸ್ಯರು ದಾಖಲೆಸಮೇತ ಆರೋಪ ಮಾಡಿದರು. ಈ ದಾಖಲೆ ಪರಿಶೀಲಿಸಿದ ಸಚಿವ ಜೋಶಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಭದ್ರಣ್ಣವರಿಗೆ ಕ್ಲಾಸ್ ತೆಗೆದುಕೊಂಡರು. ಅವೈಜ್ಞಾನಿಕ ಸರ್ವೆ ಬಗ್ಗೆ ಸಮರ್ಪಕ ಉತ್ತರ ನೀಡದ ಹಿನ್ನೆಲೆಯಲ್ಲಿ ತೋಟಗಾರಿಕೆ ಕಚೇರಿ ಎದುರು ಧರಣಿ ಮಾಡಿ ಎಂದು ಜೋಶಿ, ಸಮಿತಿ ಸದಸ್ಯರಿಗೆ ಸಲಹೆ ನೀಡಿದರು.
ಕೊನೆಗೆ ಸಚಿವರು ಜಿಲ್ಲಾಧಿಕಾರಿ ಗುರುದತ್ತ ಹೆಗಡೆಗೆ ಸೂಚಿಸಿ, ಸರ್ಕಾರದ ಮುಖ್ಯ ಕಾರ್ಯದರ್ಶಿ, ತೋಟಗಾರಿಕೆ ಇಲಾಖೆ ಕಾರ್ಯದರ್ಶಿಯ ಗಮನಕ್ಕೆ ತಂದಿದ್ದೇನೆ. ಇನ್ನೊಮ್ಮೆ ವರದಿ ಕೊಡಿ. ಬೆಳೆ ಹಾನಿ ಕುರಿತು ಸಮಗ್ರ ವರದಿ ನೀಡಿ ಎಂದು ತಿಳಿಸಿದರು.
ಓದಿ: ತಮಿಳುನಾಡಿಗೆ ಪ್ರತಿನಿತ್ಯ 5 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಆದೇಶ ಅಂತಿಮವಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್