VIDEO: ಚಂದ್ರಯಾನ 3 ಮಿನಿ ರಾಕೆಟ್ ತಯಾರಿಸಿ ಶುಭ ಕೋರಿದ ಧಾರವಾಡ ಕಲಾವಿದ - ಇಸ್ರೋ
🎬 Watch Now: Feature Video
ಧಾರವಾಡ: ಇಂದು ಮದ್ಯಾಹ್ನ ಚಂದ್ರಯಾನ 3 ರಾಕೆಟ್ ಉಡಾವಣೆ ಹಿನ್ನೆಲೆ ಧಾರವಾಡದ ಕಲಾವಿದ ಮಂಜುನಾಥ ಹಿರೇಮಠ ಅವರು ರಾಕೆಟ್ ಮಾದರಿ ತಯಾರಿಸುವ ಮೂಲಕ ವಿಶೇಷವಾಗಿ ಶುಭ ಕೋರಿದ್ದಾರೆ. ಕೆಲಗೇರಿ ಗಾಯತ್ರಿಪುರದ ಪರಿಸರ ಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ಅವರು ಉಪ್ರಗ್ರಹ ಉಡಾವಣಾ LMV ರಾಕೆಟ್ ಮಾದರಿಯನ್ನು ಚಿಕ್ಕಪೈಪ್ಗಳ ಮೂಲಕ ತಯಾರಿಸಿ ಈ ಬಾರಿಯ ಚಂದ್ರಯಾನ ಯಶಸ್ಸಿಗೆ ಪ್ರಾರ್ಥಿಸಿದ್ದಾರೆ.
ಮಿನಿ ರಾಕೆಟ್ನ್ನ ಗಣೇಶನ ಮುಂದಿಟ್ಟು ಪ್ರಾರ್ಥನೆ ಮಾಡಿ, ಈ ಬಾರಿಯ ರಾಕೆಟ್ ಉಡಾವಣೆಗೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂದು ವಿಘ್ನ ನಿವಾರಕ ಗಣೇಶನಿಗೆ ಪೂಜೆ ಸಲ್ಲಿಸಿದ್ದಾರೆ. ಇಂದು ಮದ್ಯಾಹ್ನ 2.35ಕ್ಕೆ ಶ್ರೀಹರಿ ಕೋಟದಿಂದ ಚಂದ್ರಯಾನ 3 ಉಡಾವಣೆಯಾಗಲಿದೆ. ಇದರ ಉದ್ದೇಶ ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತ ಮತ್ತು ಸಾಫ್ಟ್ ಲ್ಯಾಂಡಿಂಗ್ ಮಾಡುವಲ್ಲಿ ಭಾರತದ ಸಾಮರ್ಥ್ಯ ಪ್ರದರ್ಶಿಸುವುದು, ಚಂದ್ರನ ಮೇಲೆ ರೋವರ್ ಇಳಿಸಿ ಆಸ್ಥಳದಲ್ಲಿ ವೈಜ್ಞಾನಿಕ ಪ್ರಯೋಗಗಳನ್ನು ನಡೆಸುವುದು ಪ್ರಮುಖ ಉದ್ದೇಶವಾಗಿದೆ. ಚಂದ್ರಯಾನ ಸರಣಿಯಲ್ಲಿ ಇದು ಭಾರತದ 3ನೇ ಉಡಾವಣೆಯಾಗಿದೆ. LVM3 M4 ಉಡಾವಣಾ ರಾಕೆಟ್ ಸುಮಾರು 3,84,000 ಕಿ.ಮೀ ದೂರ ಪ್ರಯಾಣಿಸಿ ಚಂದ್ರನ ಮೇಲಿರುವ 100 ಕಿಲೋಮೀಟರ್ ಕಕ್ಷೆಯನ್ನು ತಲುಪಲಿದೆ.
ಇದನ್ನೂ ಓದಿ: ಚಂದ್ರಯಾನ 3 ಉಡಾವಣೆಗೆ ಕ್ಷಣಗಣನೆ: ಮಧ್ಯಾಹ್ನ 2.35 ಕ್ಕೆ ನಭಕ್ಕೆ ಚಿಮ್ಮಲಿದೆ ಉಪಗ್ರಹ