ಬೈಸಾಖಿ ನಿಮಿತ್ತ ಗಂಗಾಸ್ನಾನಕ್ಕಾಗಿ ಹರಿದ್ವಾರಕ್ಕೆ ಭಕ್ತರ ದಂಡು

🎬 Watch Now: Feature Video

thumbnail

ಹರಿದ್ವಾರ: ಧಾರ್ಮಿಕ ಕ್ಷೇತ್ರ ಹರಿದ್ವಾರದಲ್ಲಿ ಬೈಸಾಖಿ ಹಬ್ಬದ ಪ್ರಯುಕ್ತ ರಾಜ್ಯ, ಹೊರ ರಾಜ್ಯಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ವಿವಿಧ ಘಾಟ್​ಗಳಲ್ಲಿ ಗಂಗಾಸ್ನಾನ ಮಾಡಿ ದೇವರ ದರ್ಶನ ಪಡೆದಿದ್ದಾರೆ. ವಸಂತ ಮಾಸದಂದು ಬರುವ ಈ ಹಬ್ಬ ಮಹತ್ವಾದಾಗಿದ್ದು, ಪ್ರತಿ ವರ್ಷ ಏಪ್ರಿಲ್ 14 ರಂದು ಆಚರಿಸಲಾಗುತ್ತದೆ. 

ಬೈಸಾಖಿ ಹಬ್ಬದ ಹಿನ್ನೆಲೆ: ಏ.14 ಈ ದಿನದಂದು ಸಿಖ್​ ಸಮುದಾಯದ ಕೊನೆಯ ಗುರುಗಳಾದ ಗುರು ಗೋಬಿಂದ್ ಸಿಂಗ್​ರು 'ಖಾಲ್ಸಾ' ಪಂಥವನ್ನು ಸ್ಥಾಪನೆ ಮಾಡಿದರು. ಈ ಹಿನ್ನೆಲೆ ಅಂದಿನಿಂದ ಬೈಸಾಖಿ ಹಬ್ಬವನ್ನು ಆಚರಿಸಲಾಗುತ್ತದೆ. ಅಲ್ಲದೇ ಈ ದಿನ ಶುಭದಿನ ಎಂದು ಗೋದಿ ಬೆಳೆಯ ಕೊಯ್ಲು ಸಹ ಮಾಡಲಾಗುತ್ತದೆ. ಹಿಂದೂ ಮತ್ತು ಪಂಜಾಬಿ ಸಮುದಾಯದ ಜನರು ಒಟ್ಟಿಗೆ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. 

ಬೈಸಾಖಿಯಂದು ಗಂಗಾಸ್ನಾನಕ್ಕೆ ವಿಶೇಷ ಮಹತ್ವ: ಈ ದಿನದಂದ ಗಂಗಾಸ್ನಾನಕ್ಕೆ ಹೆಚ್ಚಿನ ಮಹತ್ವವಿದೆ ಎಂದು ಹೇಳಲಾಗುತ್ತದೆ. ಗಂಗಾನದಿಯಲ್ಲಿ ಈ ದಿನ ಸ್ನಾನ ಮಾಡುವುದರಿಂದ ಗಂಗಾಮಾತೆಯ ಕೃಪೆಗೆ ಭಕ್ತರ ಪಾತ್ರರಾಗಲಿದ್ದು ಸುಖ-ಸಮೃದ್ಧಿ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಭಕ್ತರದ್ದಾಗಿದೆ. ಈ ದಿನ ದಾದ, ಧರ್ಮ ಮಾಡುವುದರಿಂದಲೂ ಹೆಚ್ಚಿನ ಫಲ ಸಿಗುತ್ತದೆ ಎಂದು ಹೇಳಲಾಗುತ್ತದೆ. ಹೀಗಾಗಿ ಅಪಾರ ಸಂಖ್ಯೆ ಜನರು ಈ ದಿನ ಹರಿದ್ವಾರಕ್ಕೆ ಆಗಮಿಸಿ ಗಂಗಾಸ್ನಾನ ಸೇರಿದಂತೆ ದಾನ ಧರ್ಮ ಕಾರ್ಯದಲ್ಲಿ ಪಾಲ್ಗೊಳ್ಳುತ್ತಾರೆ. 

ಇದನ್ನೂ ಓದಿ:  ಭಾರೀ ಮಳೆಯ ನಡುವೆಯೂ ವಾರಣಾಸಿಯಲ್ಲಿ ವೈಭವದ ಗಂಗಾ ಆರತಿ: ವಿಡಿಯೋ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.