ಭರ್ತಿಯಾದ ಹರಿಹರದ ದೇವರಬೆಳೆಕೆರೆ ಪಿಕಪ್ ಡ್ಯಾಂ: ಮನಮೋಹಕ ದೃಶ್ಯ - ದಾವಣಗೆರೆ
🎬 Watch Now: Feature Video
ದಾವಣಗೆರೆ: ನಿರಂತರ ಮಳೆಯಿಂದ ಕೆರೆ ಕಟ್ಟೆಗಳಿಗೆ ಜೀವಕಳೆ ಬಂದಿದೆ. ಹಾಗೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ದೇವರಬೆಳೆಕೆರೆ ಗ್ರಾಮದ ಬಳಿ ಇರುವ ಪಿಕಪ್ ಡ್ಯಾಂ ಭರ್ತಿಯಾಗಿದೆ. ಇದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. 20ಕ್ಕೂ ಹೆಚ್ಚು ಹಳ್ಳಿಗಳ ರೈತರಿಗೆ ಆಸರೆಯಾಗಿರುವ ಡ್ಯಾಂಗೆ ಜಲರಾಶಿ ಹರಿದು ಬರುತ್ತಿದ್ದು, ಹೆಚ್ಚಿನ ನೀರನ್ನು ತುಂಗಭದ್ರಾ ನದಿಗೆ ಹರಿಬಿಡಲಾಗಿದೆ. ಇನ್ನು ಇಲ್ಲಿ ಮೀನು ಹಿಡಿಯಬಾರದು ಎಂದು ಅಧಿಕಾರಿಗಳು ತಾಕೀತು ಮಾಡಿದ್ದಾರೆ. ಆದರೂ ಜನರು ತಮ್ಮ ಜೀವ ಪಣಕ್ಕಿಟ್ಟು ಮೀನು ಹಿಡಿಯುವ ದುಸ್ಸಾಹಸಕ್ಕೆ ಕೈ ಹಾಕುತ್ತಿದ್ದಾರೆ.
ಈ ಡ್ಯಾಂ ನಿರ್ಮಿಸಿ ಹಲವು ವರ್ಷಗಳೇ ಉರುಳಿವೆ. ಆದರೆ ಮೂಲ ಸೌಕರ್ಯಗಳು ಮಾತ್ರ ಮರೀಚಿಕೆಯಾಗಿವೆ. ಇದಲ್ಲದೇ ಡ್ಯಾಂಗೆ ಭೇಟಿ ನೀಡುವ ಪ್ರವಾಸಿಗರು ಸುರಕ್ಷಿತವಾಗಿ ಡ್ಯಾಂ ಕಣ್ತುಂಬಿಕೊಳ್ಳಲು ತಡೆಗೋಡೆ ಅವಶ್ಯಕತೆ ಇದೆ. ಈಗಾಗಲೇ ಇರುವ ತಡೆಗೋಡೆಗಳು ಸಂಪೂರ್ಣವಾಗಿ ಹಾನಿಯಾಗಿದ್ದು, ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿವೆ. ಮಳೆಗಾಲ ಬಂತೆಂದರೆ ಹಳ್ಳಿಗಳಿಂದ ಹರಿದು ಬರುವ ನೀರು ದೇವರಬೆಳೆಕೆರೆ ಡ್ಯಾಂ ಸೇರುತ್ತದೆ. ಆದರೆ ಈ ಪಿಕಪ್ ಡ್ಯಾಂನಲ್ಲಿ ಹೆಚ್ಚು ಹೂಳು ತುಂಬಿಕೊಂಡಿದೆ. ಅದನ್ನು ತೆರವು ಮಾಡಬೇಕು ಎಂಬುದು ರೈತರ ಆಗ್ರಹ.
ಇದನ್ನೂ ಓದಿ: Watch video: ಡ್ರೋನ್ ಕ್ಯಾಮರಾದಲ್ಲಿ ರಾಧಾನಗರಿ ಡ್ಯಾಂ ಪ್ರಕೃತಿ ಸೊಬಗು ಸೆರೆ