24 ಲಕ್ಷ ದೀಪಗಳಿಂದ ಬೆಳಗಿದ ರಾಮಭೂಮಿ ಅಯೋಧ್ಯಾ - ನೋಡಿ ವೈಭವದ ವಿಡಿಯೋ - Ayodhya Laksha Dipotsava

🎬 Watch Now: Feature Video

thumbnail

By ETV Bharat Karnataka Team

Published : Nov 11, 2023, 8:08 PM IST

ಅಯೋಧ್ಯಾ : ರಾಮ ಜನ್ಮಭೂಮಿ ಅಯೋಧ್ಯಾ ಮತ್ತೊಮ್ಮೆ ದೀಪಗಳಿಂದ ಝಗಮಗಿಸಿದೆ. ದೀಪಾವಳಿ ಹಿನ್ನೆಲೆಯಲ್ಲಿ 24 ಲಕ್ಷಕ್ಕೂ ಅಧಿಕ ದೀಪಗಳನ್ನು ಹಚ್ಚಿ ಹೊಸ ದಾಖಲೆ ನಿರ್ಮಿಸಲಾಗಿದೆ. ರಾಮ್ ಕಿ ಪೈಡಿ ಮತ್ತು ಇತರ ಸ್ಥಳಗಳಲ್ಲಿ ದೀಪಗಳು ಬೆಳಗಿದವು. ಸಿಎಂ ಯೋಗಿ ಆದಿತ್ಯನಾಥ್, ರಾಜ್ಯಪಾಲೆ ಆನಂದಿ ಬೆನ್ ಪಟೇಲ್ ಸೇರಿದಂತೆ ವಿಶ್ವದ 41 ದೇಶಗಳ 61 ಪ್ರತಿನಿಧಿಗಳು ಕೂಡ ಈ ವಿಶೇಷ ಕ್ಷಣಕ್ಕೆ ಸಾಕ್ಷಿಯಾದರು. ಸಂಜೆ ಸರಯೂ ದಡದಲ್ಲಿ ಸಿಎಂ ಯೋಗಿ ಅವರು ಗಂಗಾರತಿ ಮಾಡಿದರು.

ಗಂಗಾ ನದಿಯ ದಡದ ಉದ್ದಕ್ಕೂ ಜನರು ದೀಪಗಳನ್ನು ಬೆಳಗಿಸಿದ್ದಾರೆ. ಡ್ರೋನ್​ನಲ್ಲಿ ಸುಂದರ ದೃಶ್ಯವನ್ನು ಸೆರೆ ಹಿಡಿಯಲಾಗಿದೆ. 2017 ರಿಂದ ಅಯೋಧ್ಯೆಯಲ್ಲಿ ಪ್ರತಿ ವರ್ಷ ದೀಪೋತ್ಸವ ಮಾಡಲಾಗುತ್ತಿದೆ. ಸಿಎಂ ಯೋಗಿ ಆದಿತ್ಯನಾಥ್​ ಅವರು ಈ ಸಂಪ್ರದಾಯವನ್ನು ಮೊದಲು ಆರಂಭಿಸಿದರು. ಲಕ್ಷಗಟ್ಟಲೇ ದೀಪಗಳನ್ನು ಹಚ್ಚುವ ಭಕ್ತರು ಈ ಬಾರಿ 24 ಲಕ್ಷ ದೀಪಗಳನ್ನು ಬೆಳಗಿಸಿದರು.

ನಗರದ ಜನತೆ ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ಸುಂದರ ದೃಶ್ಯವನ್ನು ಹಲವರು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆ ಹಿಡಿದರು. ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ತಂಡವು 24,59,000 ದೀಪಗಳನ್ನು ಬೆಳಗಿಸಿದೆ ಎಂದು ಲೆಕ್ಕ ಹಾಕಿದೆ.

ಇದನ್ನೂ ಓದಿ: ಅಯೋಧ್ಯೆಯಲ್ಲಿ ದೀಪೋತ್ಸವ : 24 ಲಕ್ಷ ದೀಪಗಳಿಂದ ಗಿನ್ನೆಸ್​ ದಾಖಲೆಗೆ ಸಜ್ಜು, ಜಾರ್ಖಂಡ್​ನ ಆದಿವಾಸಿಗಳು ಭಾಗಿ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.