ವಿಜಯದಶಮಿ: ಮೆಜೆಸ್ಟಿಕ್ ಅಣ್ಣಮ್ಮ ದೇವಿ ದರ್ಶನಕ್ಕೆ ಹರಿದು ಬಂದ ಭಕ್ತಸಾಗರ - Dussehra celebrations in Bangalore
🎬 Watch Now: Feature Video


Published : Oct 24, 2023, 8:05 PM IST
|Updated : Oct 24, 2023, 9:20 PM IST
ಬೆಂಗಳೂರು: ಮೆಜೆಸ್ಟಿಕ್‌ನಲ್ಲಿರುವ ಅಣ್ಣಮ್ಮ ದೇವಿ ದೇವಾಸ್ಥಾನಕ್ಕೆ ವಿಜಯದಶಮಿ ಪ್ರಯುಕ್ತ ಇಂದು ಭಕ್ತ ಸಾಗರವೇ ಹರಿದುಬಂದಿತ್ತು. ಬೆಂಗಳೂರು ಕಾಯುವ ಅಧಿದೇವತೆ ಎಂಬ ಪ್ರಸಿದ್ಧಿಯ ದೇವಿಗೆ ಮಹಿಷಾಸುರ ಮರ್ದಿನಿ ರೂಪದ ಅಲಂಕಾರ ಮಾಡಲಾಗಿತ್ತು. ಭಕ್ತರು ತೆಂಗಿನ ಕಾಯಿ, ವಿವಿಧ ಹಣ್ಣುಗಳು, ಕರ್ಪೂರ, ನೈವೇದ್ಯ ತಂದು ಸಮರ್ಪಿಸಿದರು. ಕೆಲವು ಭಕ್ತರು ತಮ್ಮ ಮಕ್ಕಳ ಹೆಸರಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತಿಭಾವ ಮೆರೆದರು. ಅಪಾರ ಸಂಖ್ಯೆಯ ಭಕ್ತರನ್ನು ನಿಯಂತ್ರಿಸಲು ದೇವಾಲಯದ ಸಿಬ್ಬಂದಿ ಹರಸಾಹಸಪಟ್ಟರು. ರಸ್ತೆಯುದ್ದಕ್ಕೂ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು.
ಟ್ರಾಫಿಕ್ ಜಾಮ್: ಮೆಜೆಸ್ಟಿಕ್ ಸುತ್ತಲಿನ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಭಕ್ತರು ವಾಹನ ನಿಲುಗಡೆಗೆ ಸ್ಥಳಾವಕಾಶ ಸಿಗದೆ ಪರದಾಡಿದರು. ವಾಹನದಟ್ಟನೆ ನಿಯಂತ್ರಿಸಲು ಪೊಲೀಸರು ಶ್ರಮಿಸಿದರು. ಹೀಗಿದ್ದರೂ ವಿಜಯ ದಶಮಿ ದಿನ ಅಣ್ಣಮ್ಮ ದೇವಿಯ ದರ್ಶನ ಪಡೆದ ಭಕ್ತರಲ್ಲಿ ಸಂಭ್ರಮ ಕಂಡುಬಂತು.
ನವರಾತ್ರಿ ಹಬ್ಬದ ಪ್ರತಿದಿನವೂ ಅಣ್ಣಮ್ಮ ದೇವಿಗೆ ವಿವಿಧ ದೇವತೆಯ ರೂಪದಲ್ಲಿ ಅಲಂಕಾರ ಮಾಡಲಾಗುತ್ತದೆ ಎಂದು ಅರ್ಚಕ ಮದನ ಕುಮಾರ ತಿಳಿಸಿದರು.
ಮಲ್ಲೇಶ್ವರದಲ್ಲಿರುವ ಗಂಗಮ್ಮ ದೇವಿಯ ದೇವಸ್ಥಾನದಲ್ಲಿ ದಸರಾ ಹಬ್ಬದ ಸಡಗರ ಮನೆ ಮಾಡಿತ್ತು. ಮುಖ್ಯದ್ವಾರದ ಬಳಿ ಅಂಬಾರಿ ಮಾದರಿಯಲ್ಲಿ ಗಂಗಮ್ಮನನ್ನು ಕೂರಿಸಿ ವಿಶೇಷ ಅಲಂಕಾರದಿಂದ ಕಂಗೊಳಿಸುವಂತೆ ಮಾಡಲಾಗಿತ್ತು. ಧರ್ಮರಾಯ ದೇವಸ್ಥಾನದಲ್ಲಿ ದ್ರೌಪದಿ ಅರ್ಜುನರ ವಿಶೇಷ ರಥೋತ್ಸವ ನಡೆಸಲಾಯಿತು.
ಇದನ್ನೂಓದಿ: ವಿಜಯನಗರ: ದೇವರ ಬನ್ನಿ ಉತ್ಸವ ಸಂಭ್ರಮ, 20ಕ್ಕೂ ಹೆಚ್ಚು ಶಕ್ತಿ ದೇವತೆಗಳ ಆರಾಧನೆ