ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ ಯಂತ್ರ ಸೇರಿದಂತೆ 14 ವಾಹನಗಳಿಗೆ ಬೆಂಕಿ ಹಚ್ಚಿದ ನಕ್ಸಲರು - ಭನ್ಸಿ ಪೊಲೀಸ್ ಠಾಣಾ ವ್ಯಾಪ್ತಿ
🎬 Watch Now: Feature Video


Published : Nov 27, 2023, 1:36 PM IST
ದಾಂತೇವಾಡ (ಛತ್ತೀಸ್‌ಗಢ): ಛತ್ತೀಸ್‌ಗಢದ ದಾಂತೇವಾಡ ಜಿಲ್ಲೆಯಲ್ಲಿ ಭಾನುವಾರ ತಡರಾತ್ರಿ ಶಂಕಿತ ನಕ್ಸಲರು ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಯಂತ್ರಗಳು ಸೇರಿದಂತೆ ಕನಿಷ್ಠ 14 ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಭನ್ಸಿ ಪೊಲೀಸ್ ಠಾಣಾ ವ್ಯಾಪ್ತಿಯ ಬಂಗಾಲಿ ಕ್ಯಾಂಪ್‌ನಲ್ಲಿ ಮಧ್ಯರಾತ್ರಿ 1.30ರ ಸುಮಾರಿಗೆ ನಡೆದ ಘಟನೆಯಲ್ಲಿ ಯಾವುದೇ ವ್ಯಕ್ತಿ ಗಾಯಗೊಂಡಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
40 ರಿಂದ 50 ಅಪರಿಚಿತರಲ್ಲಿ ಕೆಲವರು ಶಸ್ತ್ರಸಜ್ಜಿತರು ಘಟನಾ ಸ್ಥಳಕ್ಕೆ ತಲುಪಿದ್ದರು. ಅಲ್ಲಿ ನಿಲ್ಲಿಸಿದ್ದ ಟ್ರಕ್‌ಗಳು, ಪೊಕ್ಲೇನ್ ಮತ್ತು ಯಂತ್ರಗಳು ಸೇರಿದಂತೆ 14 ವಾಹನಗಳನ್ನು ಸುಟ್ಟು ಹಾಕಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಖಾಸಗಿ ನಿರ್ಮಾಣ ಸಂಸ್ಥೆಗೆ ಸೇರಿದ 13 ವಾಹನಗಳು ಮತ್ತು ಯಂತ್ರಗಳು ದಾಂತೇವಾಡ ಮತ್ತು ಬಾಚೇಲಿ ನಡುವೆ ರಸ್ತೆ ನಿರ್ಮಾಣದಲ್ಲಿ ತೊಡಗಿದ್ದರೆ, ಸರ್ಕಾರಿ ಒಡೆತನದ ನೀರಿನ ಟ್ಯಾಂಕರ್ ರೈಲ್ವೆ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದವು. ಕೂಡಲೇ ಎಚ್ಚೆತ್ತ ಭಾನ್ಸಿ ಠಾಣಾಧಿಕಾರಿ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ಬಂದು ಪರಿಶೀಲಿಸಿದೆ. ಮೇಲ್ನೋಟಕ್ಕೆ ಇದು ನಕ್ಸಲರ ಕೈವಾಡವಿರುವಂತೆ ಕಾಣಿಸುತ್ತಿದೆ. ಆರೋಪಿಗಳ ಪತ್ತೆಗಾಗಿ ಆ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ಭುವನೇಶ್ವರ: 'ವಂದೇ ಭಾರತ್ ಎಕ್ಸ್‌ಪ್ರೆಸ್' ರೈಲಿಗೆ ಕಿಡಿಗೇಡಿಗಳಿಂದ ಕಲ್ಲು, ಕಿಟಕಿ ಗಾಜುಗಳಿಗೆ ಹಾನಿ