ಧಾರಾಕಾರ ಮಳೆಗೆ ಅಪಾಯದ ಮಟ್ಟ ತಲುಪಿದ ಡ್ಯಾಂ: ಮತ್ತೆ ಜಲಾವೃತಗೊಂಡ ಪಂಜಾಬ್.. ಡ್ರೋನ್ ವಿಡಿಯೋ - ಡ್ರೋನ್ ವಿಡಿಯೋ
🎬 Watch Now: Feature Video
ಚಂಡೀಗಢ( ಪಂಜಾಬ್): ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಪಂಜಾಬ್ನಲ್ಲಿ ಮತ್ತೊಮ್ಮೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಟ್ಲೆಜ್ ನದಿಗೆ ಕಟ್ಟಿರುವ ದೇಶದ ಅತಿದೊಡ್ಡ ಅಣೆಕಟ್ಟು ಭಾಕ್ರಾ ಅಣೆಕಟ್ಟು ಹಾಗೂ ಬಿಯಾಸ್ ನದಿಯ ಪಾಂಗ್ ಅಣೆಕಟ್ಟು ಅಪಾಯದ ಮಟ್ಟ ತಲುಪಿದೆ. ಸುಮಾರು 35 ವರ್ಷಗಳ ಬಳಿಕ ಭಾಕ್ರಾ ಅಣೆಕಟ್ಟಿನ ಗೇಟ್ಗಳನ್ನು 10 ಅಡಿಗಳಿಂತಲೂ ಹೆಚ್ಚು ತೆರೆಯಲಾಗಿದ್ದರೆ, ಪಾಂಗ್ ಡ್ಯಾಂನಿಂದ ನಿರಂತರವಾಗಿ ನೀರನ್ನು ಹೊರಕ್ಕೆ ಹರಿ ಬಿಡಲಾಗುತ್ತಿದೆ. ಇದರಿಂದಾಗಿ ರಾಜ್ಯದ ಹಲವಾರು ಪ್ರದೇಶಗಳು ಜಲಾವೃತಗೊಂಡಿವೆ.
ಜಲಾವೃತಗೊಂಡಿರುವ ರೂಪ್ ನಗರ ಜಿಲ್ಲೆಯ ಡ್ರೋನ್ ವಿಡಿಯೋ ಬಿಡುಗಡೆಯಾಗಿದ್ದು, ಸೋಮವಾರ ಡ್ಯಾಂ ಗೇಟ್ಗಳನ್ನು ತೆರೆದ ಬಳಿಕ ನೀರಿನ ಮಟ್ಟ ಕಡಿಮೆಯಾಗಿ ಗ್ರಾಮಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಸಚಿವ ಹರ್ಜೋತ್ ಬೈನ್ಸ್, ಪರಿಸ್ಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಎನ್ಡಿಆರ್ಎಫ್, ಸೇನೆ ಹಾಗೂ ವಾಯಪಡೆ ನಿಯೋಜಿಸಿದ್ದಾರೆ. ಸ್ವತಃ ತಾವೇ ಸ್ಥಳಗಳಿಗೆ ತೆರಳಿ ಅಪಾಯದ ಬಗ್ಗೆ ಎಚ್ಚರ ವಹಿಸುವಂತೆ ಜನರ ಬಳಿ ಮನವಿ ಮಾಡಿಕೊಂಡಿದ್ದಾರೆ.
ಇದಲ್ಲದೆ ಪೊಲೀಸ್, ಆರೋಗ್ಯ ಇಲಾಖೆ ಹಾಗೂ ಡಿಸಿ ಕಚೇರಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಜನರ ರಕ್ಷಣೆಗಾಗಿ ಮಾರ್ಷಲ್ ಅಕಾಡೆಮಿ ಮತ್ತು ಪಂಜಾಬ್ ಸ್ಟೇಟ್ ಪವರ್ ಕಾರ್ಪೋರೇಷನ್ ಮೈದಾನವನ್ನು ಹೆಲಿಪ್ಯಾಡ್ ಆಗಿ ಒಳಸಲಾಗಿದೆ.
ಇದನ್ನೂ ನೋಡಿ: ಅಪಾಯದ ಮಟ್ಟ ಮೀರಿ ಹರಿದ ಗಂಗಾನದಿ.. ಋಷಿಕೇಶ ಶಿವನ ಪ್ರತಿಮೆ ಮುಳುಗುವ ಹಂತಕ್ಕೆ ತಲುಪಿದ ನೀರು