ಮುಂಬೈನಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಸಂಭ್ರಮ : ಅಂಧ ಮಕ್ಕಳಿಂದ ಮೊಸರು ಕುಡಿಕೆ ಒಡೆಯುವ ಸ್ಪರ್ಧೆ - ಅಂಧ ಮಕ್ಕಳಿಂದ ಮೊಸರು ಕುಡಿಕೆ
🎬 Watch Now: Feature Video
Published : Sep 7, 2023, 7:40 PM IST
|Updated : Sep 7, 2023, 8:48 PM IST
ಮುಂಬೈ (ಮಹಾರಾಷ್ಟ್ರ) : ದೇಶಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಜನ್ಮಾಷ್ಟಮಿ ಹಿನ್ನೆಲೆ ಹಲವೆಡೆ ವಿವಿಧ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಇದರ ಜೊತೆಗೆ ಕೃಷ್ಣನ ಬಾಲ್ಯವನ್ನು ನೆನಪಿಸುವ ವಿವಿಧ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗುತ್ತದೆ. ಇದರಲ್ಲಿ ಪ್ರಮುಖವಾಗಿ ಮೊಸರು ಕುಡಿಕೆ ಒಡೆಯುವ ಸ್ಪರ್ಧೆ ಆಚರಿಸಲಾಗುತ್ತದೆ. ವಿವಿಧೆಡೆ ಮೊಸರು ಕುಡಿಕೆ ಸ್ಪರ್ಧೆಯನ್ನು ಆಚರಿಸಲಾಗುತ್ತದೆ. ಈ ವೇಳೆ, ಸ್ಪರ್ಧಾಳುಗಳು ಮಾನವ ಗೋಪುರಗಳನ್ನು ನಿರ್ಮಿಸಿ ಮೊಸರು ಕುಡಿಕೆ ಡೆಯುತ್ತಾರೆ.
ಮುಂಬೈ ಮಹಾನಗರದಲ್ಲಿಯೂ ಮೊಸರು ಕುಡಿಕೆ ಉತ್ಸವ (ದಹಿ ಹಂಡಿ ಉತ್ಸವ) ಬಹು ಅದ್ಧೂರಿಯಿಂದ ನಡೆಯಿತು. ಮುಂಬೈನ ವಿವಿಧೆಡೆ ಮೊಸರು ಕುಡಿಕೆ ಉತ್ಸವವನ್ನು ಆಚರಿಸಲಾಯಿತು. ದಾದರ್ನಲ್ಲಿ ಮಹಿಳೆಯರಿಗಾಗಿಯೇ ಪ್ರತಿ ವರ್ಷ ಮೊಸರು ಕುಡಿಕೆ ಒಡೆಯುವ ಆಚರಣೆ ನಡೆಸಲಾಗುತ್ತದೆ. ಇದರನ್ನು ಸೆಲೆಬ್ರಿಟಿ ದಹಿ ಹಂಡಿ ಎಂದು ಕರೆಯುತ್ತಾರೆ. ಅಲ್ಲದೇ ಸುವಿಧಾ, ಎಂಎನ್ಎಸ್, ದಾದರ್ನಲ್ಲಿ ವಿಶೇಷವಾಗಿ ಮೊಸರು ಕುಡಿಕೆ ಉತ್ಸವವನ್ನು ಆಚರಿಸಲಾಗುತ್ತದೆ. ಸಾವಿರಾರು ಜನರು ಮೊಸರು ಕುಡಿಕೆ ಉತ್ಸವದಲ್ಲಿ ಪಾಲ್ಗೊಂಡು ಸಂಭ್ರಮಾಚರಣೆ ಮಾಡುತ್ತಾರೆ.
ದಾದರ್ನಲ್ಲಿ ನಯನ ಫೌಂಡೇಶನ್ ವತಿಯಿಂದ ಅಂಧ ಮಕ್ಕಳಿಗಾಗಿ ಮೊಸರು ಕುಡಿಕೆ ಒಡೆಯುವ ಸ್ಪರ್ಧೆ ಆಯೋಜಿಸಲಾಗಿತ್ತು. ಇದರಲ್ಲಿ ಹೆಣ್ಣುಮಕ್ಕಳಿಗೆ ಪ್ರತ್ಯೇಕ ಮೂರು ಹಂತದ ಮಾನವ ಗೋಪುರ ನಿರ್ಮಿಸುವ ಮತ್ತು ಗಂಡು ಮಕ್ಕಳಿಗೆ ನಾಲ್ಕು ಹಂತದ ಮಾನವ ಗೋಪುರ ನಿರ್ಮಿಸಿ ಮೊಸರು ಕುಡಿಕೆ ಒಡೆಯುವ ಸ್ಪರ್ಧೆ ನಡೆಯಿತು. ಇದರಲ್ಲಿ ಅಂಧ ಮಕ್ಕಳು ಪಾಲ್ಗೊಂಡರು.
ಈ ಬಗ್ಗೆ ಪ್ರತಿಕ್ರಿಯಿಸಿದ ನಯನ ಫೌಂಡೇಶನ್ ಅಧ್ಯಕ್ಷ, ನಯನಾ ಫೌಂಡೇಶನ್ ಮಹಾರಾಷ್ಟ್ರ ಏಕೈಕ ಅಂಧ ಮಕ್ಕಳ ಆರೈಕೆ ಮಾಡುವ ಫೌಂಡೇಶನ್ ಆಗಿದೆ. ಕಳೆದ 10 ವರ್ಷಗಳಿಂದ ಈ ಸಂಸ್ಥೆಯು ಮೊಸರು ಕುಡಿಕೆ ಉತ್ಸವವನ್ನು ಆಚರಿಸಿಕೊಂಡು ಬಂದಿದೆ. ಈ ಸಂಸ್ಥೆಯ ಗೋವಿಂದ ತಂಡವು ಮೊಸರು ಕುಡಿಕೆಯಲ್ಲಿ ಯಶಸ್ವಿಯಾಗಿ ಭಾಗವಹಿಸುತ್ತದೆ ಎಂದು ಹೇಳಿದರು.
ಇದನ್ನೂ ಓದಿ : ವಿಜಯನಗರ: ಉರ್ದು ಶಾಲೆಯಲ್ಲಿ ಅದ್ದೂರಿಯಾಗಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ