Cyclone Biparjoy : ಸಮುದ್ರದಲ್ಲಿ ಸಿಲುಕಿದ್ದ 50 ಮಂದಿಯನ್ನು ರಕ್ಷಿಸಿದ ಭಾರತೀಯ ಕೋಸ್ಟ್ ಗಾರ್ಡ್- ವಿಡಿಯೋ - ಈಟಿವಿ ಭಾರತ ಕನ್ನಡ ನ್ಯೂಸ್
🎬 Watch Now: Feature Video
ದ್ವಾರಕಾ( ಗುಜರಾತ್): ಗುಜರಾತ್ನಲ್ಲಿ ಬಿಪರ್ಜೋಯ್ ಚಂಡಮಾರುತದ ಭೀತಿ ಮುಂದುವರೆದಿದೆ. ಗುಜರಾತ್ನ ಕಚ್ ಜಿಲ್ಲೆಗೆ ಚಂಡ ಮಾರುತ ಅಪ್ಪಳಿಸಲಿದೆ ಎಂದು ಈಗಾಗಲೇ ಭಾರತೀಯ ಹವಾಮಾನ ಇಲಾಖೆ ಮನ್ಸೂಚನೆ ನೀಡಿದೆ. ಚಂಡಮಾರುತದಿಂದ ಭಾರೀ ಹಾನಿ ಸಂಭವಿಸುವ ಸಾಧ್ಯತೆ ಇದೆ ಎಂದು ಇಲಾಖೆ ಮಾಹಿತಿ ನೀಡಿದೆ. ಈ ಸಂಬಂಧ ರಾಜ್ಯದ ಮೂರು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಚಂಡಮಾರುತದ ಪರಿಣಾಮದಿಂದಾಗಿ ರಾಜ್ಯದ ಹಲವೆಡೆ ಭಾರೀ ಮಳೆಯಾಗುತ್ತಿದೆ.
ದ್ವಾರಕಾ ಸಮುದ್ರದ ತೈಲ ರಿಂಗ್ನಲ್ಲಿ ಕೆಲಸ ಮಾಡುತ್ತಿದ್ದ 50 ಜನರನ್ನು ಭಾರತೀಯ ಕೋಸ್ಟ್ ಗಾರ್ಡ್ ರಕ್ಷಣೆ ಮಾಡಿದೆ. ಗುಜರಾತ್ನ ಓಖಾ ಶಿಪ್ ಶೋರ್ ಮತ್ತು ಜ್ಯಾಕ್ ಅಪ್ ರಿಂಗ್ 'ಕೀ ಸಿಂಗಾಪುರ'ನಲ್ಲಿ ಸಿಲುಕಿದ್ದ ಒಟ್ಟು 50 ಮಂದಿಯನ್ನು ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದೆ. ಪ್ರತಿಕೂಲ ವಾತಾವರಣವನ್ನು ಲೆಕ್ಕಿಸದೇ ಕೋಸ್ಟ್ ಗಾರ್ಡ್ ಕಾರ್ಯಾಚರಣೆ ಕೈಗೊಂಡಿತ್ತು. ಜೂನ್ 12ರಂದು ಒಟ್ಟು 26 ಜನರನ್ನು ಕೋಸ್ಟ್ ಗಾರ್ಡ್ ರಕ್ಷಣೆ ಮಾಡಿತ್ತು. ಇಂದು 24 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಕಳೆದೆರಡು ದಿನಗಳ ಹಿಂದೆ ಖಾಸಗಿ ಕಂಪನಿಯ ತೈಲ ರಿಂಗ್ನಲ್ಲಿ ಸಿಲುಕಿದ್ದ 11 ಜನರನ್ನು ಭಾರತೀಯ ಕೋಸ್ಟ್ ಗಾರ್ಡ್ ರಕ್ಷಣೆ ಮಾಡಿತ್ತು.
ಇದನ್ನೂ ಓದಿ : ಬೆಂಗಳೂರಿನಲ್ಲಿ ನೀರು ಮಿಶ್ರಿತ ಡೀಸೆಲ್ ಹಾಕಿ ಬಂಕ್ ಸಿಬ್ಬಂದಿಯಿಂದ ಯಡವಟ್ಟು: ಕೆಟ್ಟು ನಿಂತ ವಾಹನಗಳು!