Cyclone Biparjoy: ರಾಜಸ್ಥಾನದಲ್ಲಿ ಬಿಪರ್​ಜೋಯ್​​ ಚಂಡಮಾರುತದಿಂದ ಭಾರಿ ಮಳೆ, ಜನಜೀವನಕ್ಕೆ ಬರೆ- ವಿಡಿಯೋ - ರಾಜಸ್ಥಾನದಲ್ಲಿ ಚಂಡಮಾರುತದ ಪರಿಣಾಮ

🎬 Watch Now: Feature Video

thumbnail

By

Published : Jun 18, 2023, 12:53 PM IST

ರಾಜಸ್ಥಾನ: ಬಿಪರ್​ಜೋಯ್​​ ಚಂಡಮಾರುತಕ್ಕೆ ರಾಜಸ್ಥಾನ ತತ್ತರಿಸಿದೆ. ರಾಜ್ಯದ ವಿವಿಧೆಡೆ ಭಾರಿ ಮಳೆ ಸುರಿಯುತ್ತಿದೆ. ರಸ್ತೆಗಳು ನೀರಿನಿಂದ ಆವರಿಸಿದ್ದು ವಾಹನ, ಜನ ಸಂಚಾರ ಸ್ಥಗಿತವಾಗಿದೆ. ಮಳೆಯೊಂದಿಗೆ ಬಿರುಸಾದ ಗಾಳಿಯೂ ಬೀಸುತ್ತಿದೆ. ಮರಗಳು ಧರೆಗೆ ಅಪ್ಪಳಿಸಿವೆ. ಎನ್​ಡಿಆರ್​ಎಫ್​ ತಂಡದಿಂದ ರಕ್ಷಣಾ ಕಾರ್ಯಚರಣೆ ನಡೆಯುತ್ತಿದೆ.

ರಾಜ್ಯದ ಬಾರ್ಮರ್​, ಜಲೋರ್​ ಪ್ರದೇಶಗಳು ಜಲಾವೃತವಾಗಿವೆ. ಇಲ್ಲಿ ಪ್ರವಾಹದಂತಹ ಪರಿಸ್ಥಿತಿ ಕಂಡು ಬರುತ್ತಿದೆ. ಕೆಲವು ಪ್ರದೇಶಗಳಲ್ಲಿ ಕಟ್ಟಡದ ಕೆಳಗೆ ನಿಲ್ಲಿಸಿದ್ದ ವಾಹನಗಳಿಗೆ ಹಾನಿಯಾಗಿದೆ. ಚಂಡಮಾರುತದ ಪ್ರಭಾವದಿಂದ ಕಛ್​​ನ ಭುಜ್‌ನಲ್ಲಿ ಹಲವು ಮರಗಳು ನೆಲಕ್ಕುರುಳಿವೆ.

ಮುಂದಿನ 12 ಗಂಟೆಗಳಲ್ಲಿ ಜೋರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಹಾನಿರ್ದೇಶಕ ಡಾ. ಮೃತ್ಯುಂಜಯ್ ಮಹಾಪಾತ್ರ ಮುನ್ಸೂಚನೆ ನೀಡಿದ್ದಾರೆ. ಜೊತೆಗೆ, ಚಂಡಮಾರುತ ಪೀಡಿತ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ರೈಲು ಸಂಚಾರವನ್ನೂ ಸ್ಥಗಿತಗೊಳಿಸಲಾಗಿದೆ. ರಾಜಸ್ಥಾನದ ಸಿಹೋಲ್​ನಲ್ಲಿ ವಿದ್ಯುತ್​ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಇದರಿಂದಾಗಿ ಮೊಬೈಲ್​ಗಳು ಕೆಲಸ ಮಾಡದೇ ಅಲ್ಲಿನ ಜನರು ತೊಂದರೆಗೆ ಸಿಲುಕಿದ್ದಾರೆ ಎಂದು ತಿಳಿದು ಬಂದಿದೆ. 

ಇದನ್ನೂ ಓದಿ: ಗುಜರಾತಲ್ಲಿ ಅಬ್ಬರಿಸಿ ಬೊಬ್ಬಿರಿದ 'ಬಿಪರ್​ಜೋಯ್​' ಶಾಂತ... ಚಂಡಮಾರುತ ದುರ್ಬಲ.. ರಾಜಸ್ಥಾನದಲ್ಲಿ ಧಾರಾಕಾರ ಮಳೆ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.