ಬ್ಯಾಂಕ್ ದರೋಡೆ, ಅಡವಿಟ್ಟ ಗ್ರಾಹಕರ ಚಿನ್ನಾಭರಣ ಕಳ್ಳರ ಪಾಲು: ಬ್ಯಾಂಕ್ಗೆ ಮುತ್ತಿಗೆ ಹಾಕಿದ ಗ್ರಾಹಕರು - ಬ್ಯಾಂಕ್ಗೆ ಮುತ್ತಿಗೆ ಹಾಕಿದ ಗ್ರಾಹಕರು
🎬 Watch Now: Feature Video
ದೊಡ್ಡಬಳ್ಳಾಪುರ: ಕಳೆದ ವರ್ಷ ನವೆಂಬರ್ 25 ರಂದು ಇಲ್ಲಿಯ ಹೊಸಹಳ್ಳಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್ನಲ್ಲಿ ಕಳ್ಳತನ ನಡೆದಿತ್ತು. ಬ್ಯಾಂಕ್ ದರೋಡೆ ನಡೆಸಿದ ಕಳ್ಳರು ಗ್ರಾಹಕರು ಅಡವಿಟ್ಟ ಸುಮಾರು 3.50 ಕೋಟಿ ರೂಪಾಯಿ ಮೌಲ್ಯದ 12 ಕೆ.ಜಿ.ಚಿನ್ನಾಭರಣ ಹಾಗೂ ರೂ.14 ಲಕ್ಷ ನಗದು ದೋಚಿ ಪರಾರಿಯಾಗಿದ್ದರು. ಬ್ಯಾಂಕ್ನಲ್ಲಿಟ್ಟಿದ್ದ ಚಿನ್ನಾಭರಣ ಮತ್ತು ಹಣ ಕಳೆದುಕೊಂಡಿರುವ ಗ್ರಾಹಕರಿಗೆ ಘಟನೆ ನಡೆದು ಎರಡು ತಿಂಗಳಾದರೂ ಬ್ಯಾಂಕ್ ಪರಿಹಾರ ನೀಡಿಲ್ಲ ಎಂದು ರೋಸಿ ಹೋದ ಗ್ರಾಹಕರು ಇಂದು ವಿಷದ ಬಾಟಲ್ ಹಿಡಿದು ಬ್ಯಾಂಕ್ಗೆ ಮುತ್ತಿಗೆ ಹಾಕಿದ್ದಾರೆ.
ಬ್ಯಾಂಕ್ನಲ್ಲಿ ಕಳ್ಳತನ ನಡೆದು ನಂತರ ಜನವರಿ 27ರಂದು ಅಡವಿಟ್ಟ ಚಿನ್ನಾಭರಣ ಹಿಂದುರುಗಿಸುವಂತೆ ಗ್ರಾಹಕರು ಬ್ಯಾಂಕ್ಗೆ ಮುತ್ತಿಗೆ ಹಾಕಿದ್ದರು. ಬಳಿಕ ಫೆಬ್ರವರಿ 10ರಂದು ಬ್ಯಾಂಕಿನ ಹಿರಿಯ ಅಧಿಕಾರಿಗಳು ಹೊಸಹಳ್ಳಿಗೆ ತೆರಳಿ ಗ್ರಾಹಕರ ಸಭೆ ನಡೆಸಿ, ಅಹವಾಲು ಆಲಿಸಿದ್ದರು. ಗ್ರಾಹಕರ ಸಭೆ ನಂತರವೂ ಯಾವುದೇ ಬೆಳವಣಿಗೆ ನಡೆಯದ ಕಾರಣ ಅಡವಿಟ್ಟ ಚಿನ್ನಾಭರಣಗಳನ್ನು ನೀಡಬೇಕು, ಇಲ್ಲವಾದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಗ್ರಾಹಕರು ಇಂದು ಬ್ಯಾಂಕ್ಗೆ ಮುತ್ತಿಗೆ ಹಾಕಿ ಬೆದರಿಕೆ ಹಾಕಿದ್ದಾರೆ. ಗ್ರಾಹಕರಿಗೆ ಮಣಿದ ಅಧಿಕಾರಿಗಳು ಮಾರ್ಚ್ 1 ರಂದು ಗ್ರಾಹಕರ ಸಭೆ ನಡೆಸಿ ಇತ್ಯರ್ಥ ಮಾಡುವ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಗ್ರಾಮೀಣ ಬ್ಯಾಂಕ್ ದರೋಡೆ ಪ್ರಕರಣ: ಉತ್ತರ ಪ್ರದೇಶದಲ್ಲಿ ಇಬ್ಬರು ಕಳ್ಳರನ್ನು ಸೆರೆಹಿಡಿದ ಪೊಲೀಸರು