ಮೊಸಳೆ ಪ್ರತ್ಯಕ್ಷ.. ಸ್ಥಳಾಂತರಕ್ಕೆ ಗ್ರಾಮಸ್ಥರು ಒತ್ತಾಯ - ಈಟಿವಿ ಭಾರತ್ ಕನ್ನಡ ನ್ಯೂಸ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/01-08-2023/640-480-19154637-thumbnail-16x9-mh.jpg)
ಯಾದಗಿರಿ : ಜಿಲ್ಲೆಯ ವಡಗೇರಾ ತಾಲೂಕಿನ ಹಯ್ಯಾಳ ಕೆ. ಗ್ರಾಮದ ಹಳ್ಳಯೊಂದರ ಪಕ್ಕದ ರಸ್ತೆಯಲ್ಲಿ ಮೊಸಳೆ ಪ್ರತ್ಯಕ್ಷವಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಕಳೆದ ದಿನಗಳಿಂದ ಮಳೆಯಾದ ಹಿನ್ನೆಲ್ಲೇ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನದಿಗಳಿಗೆ ನೀರು ಹರಿಸಲಾಗುತ್ತಿದೆ. ಇದರಿಂದ ನದಿ ಹಿನ್ನಿರಿನ ಪ್ರದೇಶ ವಿಸ್ತಾರಗೊಂಡಿದ್ದು, ಹಳ್ಳ ಕೊಳ್ಳಕ್ಕೆ ನೀರು ಹರಿದು ಬರುತ್ತಿರುವುದರಿಂದ ಭಾನುವಾರ ಸಾಯಂಕಾಲ ಮೊಸಳೆ ಪ್ರತ್ಯಕ್ಷವಾಗಿದೆ.
ಈ ಗ್ರಾಮದ ಮಾರ್ಗಕ್ಕೆ ಸೇತುವೆ ರಸ್ತೆ ಇದಾಗಿರುವುದರಿಂದ ರಾತ್ರಿಯ ಸಮಯದಲ್ಲಿ ಓಡಾಡು ಸಾರ್ವಜನಿಕರು, ರೈತರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಮುಂದೆ ಮೊಸಳೆ ಗ್ರಾಮದೊಳಗೆ ನುಗ್ಗಿ ಜನ-ಜಾನುವಾರುಗಳ ಜೀವ ಕಳೆದುಕೊಂಡರೆ ಹೇಗೆ ಎಂಬ ಭಯವನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದು, ಆದಷ್ಟು ಬೇಗ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆಯವರು ಎಚ್ಚೆತ್ತುಕೊಂಡು ಗ್ರಾಮದ ಹಳ್ಳದಲ್ಲಿ ಬಿಡು ಬಿಟ್ಟಿರುವ ಮೊಸಳೆಯನ್ನು ಪತ್ತೆ ಹಚ್ಚಿ ರಕ್ಷಣೆ ಮಾಡಿ ಬೇರೆಡೆ ಸ್ಥಳಾಂತರಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ಶರಣರೆಡ್ಡಿ ಹತ್ತಿಗೂಡುರ ಮತ್ತು ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಶುರಾಮ್ ಚಲುವಾದಿ ಒತ್ತಾಯಿಸಿದ್ದಾರೆ.
ಇದನ್ನೂ ಓದಿ : Crocodiles Video: ರಾಯಚೂರಿನ ಕುರ್ವಕುಲ ಗ್ರಾಮದ ಬಳಿ ಮೊಸಳೆಗಳ ಹಿಂಡು! ನೋಡಿ