ಬನ್ನೇರುಘಟ್ಟ ಮೃಗಾಲಯದ ಬೋಟಿಂಗ್ ಕೊಳದಲ್ಲಿ ಮೊಸಳೆ ಪ್ರತ್ಯಕ್ಷ - ಬನ್ನೇರುಘಟ್ಟ ಮೃಗಾಲಯದ ಬೋಟಿಂಗ್ ಕೊಳ
🎬 Watch Now: Feature Video
ಬೆಂಗಳೂರು: ಜಿಲ್ಲೆಯ ಬನ್ನೇರುಘಟ್ಟ ಮೃಗಾಲಯದ ಬೋಟಿಂಗ್ ಕೊಳದಲ್ಲಿ ದಿಢೀರನೇ ಮೊಸಳೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ. ಪ್ರತಿ ದಿನ ಬೋಟಿಂಗ್ ಮಾಡಲು ಮೃಗಾಲಯಕ್ಕೆ ಬರುವ ಪ್ರೇಕ್ಷಕರಿಗೆ ಈ ಸುದ್ದಿ ಭೀತಿ ಮೂಡಿಸಿದೆ. ಸಹಜವಾಗಿ ಮೃಗಾಲಯದಲ್ಲಿ ಇರುವ ಮೊಸಳೆಗಳು ಅಲ್ಲದೇ ಮೃಗಾಲಯದ ಆಚೆಯಿಂದ ಮೊಸಳೆ ಬಂದಿರಬಹುದು ಎಂದು ಅಂದಾಜಿಸಲಾಗಿದೆ.
ಮೃಗಾಲಯಕ್ಕೆ ಬಂದ ಪ್ರವಾಸಿಗರು ಬೋಟಿಂಗ್ ಮಾಡುತ್ತಿದ್ದ ವೇಳೆ ಏಕಾಏಕಿ ಮೊಸಳೆ ಪ್ರತ್ಯಕ್ಷಗೊಂಡಿದೆ. ಮೊಸಳೆಯನ್ನು ಕಂಡು ಭಯಗೊಂಡ ಪ್ರವಾಸಿಗರು ತಕ್ಷಣವೇ ಮೃಗಾಲಯದ ಅಧಿಕಾರಿಗಳಿಗೆ ಮಾಹಿತಿ ತಲುಪಿಸಿದ್ದಾರೆ. ಮೊಸಳೆ ಕಾಣಿಸಿಕೊಂಡ ಬೆನ್ನಲ್ಲೆ ಕೊಳದಲ್ಲಿ ಬೋಟಿಂಗ್ ಸ್ಥಗಿತಗೊಳಿಸಲಾಗಿತ್ತು. ಕೂಡಲೇ ಅಧಿಕಾರಿಗಳ ಸ್ಥಳಕ್ಕೆ ಧಾವಿಸಿದ್ದು, ಮೊಸಳೆಯನ್ನು ಬೋಟಿಂಗ್ ಕೊಳದಿಂದ ಸ್ಥಳಾಂತರಿಸುವ ಕಾರ್ಯ ಕೈಗೊಂಡಿದ್ದಾರೆ. ಕೆಲಕಾಲ ಕಾರ್ಯಚರಣೆ ನಡೆಸಿದ ಮೃಗಾಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿ ಹರಸಾಹಸ ಪಟ್ಟು ಮೊಸಳೆಯನ್ನು ಹೊರಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಕೊನೆಗೂ ಮೊಸಳೆ ಹೊರತಂದು ಸುರಕ್ಷಿತ ಜಾಗಕ್ಕೆ ತಲುಪಿಸಿದ್ದಾರೆ. ನಂತರ ಪ್ರವಾಸಿಗರಿಗೆ ಬೋಟಿಂಗ್ ಆರಂಭಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ನೋಡಿ: ವಿಜಯಪುರ: ಕಲ್ಯಾಣ ಮಂಟಪದ ಶೆಡ್ನಲ್ಲಿ ಮೊಸಳೆ ಪ್ರತ್ಯಕ್ಷ