thumbnail

ಹುಬ್ಬಳ್ಳಿಯಲ್ಲಿ ಸಿಸಿ ಕ್ಯಾಮರಾ ಒಡೆದು ಕಳ್ಳತನಕ್ಕೆ ಯತ್ನಿಸಿದ್ದ ಖದೀಮ: ಜನರ ಕೈಗೆ ಸಿಕ್ಕಿಬಿದ್ದ ಆರೋಪಿ ಪೊಲೀಸರ ವಶಕ್ಕೆ

By

Published : Jul 2, 2023, 6:46 PM IST

ಹುಬ್ಬಳ್ಳಿ: ಮನೆಯ ಸಿಸಿಟಿವಿ ಕ್ಯಾಮರಾ ಒಡೆದು ಕಳ್ಳತನಕ್ಕೆ ಯತ್ನಿಸಿದ ಆರೋಪಿಯನ್ನು ಸಾರ್ವಜನಿಕರೇ ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿರುವ ಘಟನೆ ಹುಬ್ಬಳ್ಳಿಯ ಇಟಗಿ ಮಾರುತಿ ಗಲ್ಲಿಯಲ್ಲಿ ನಡೆದಿದೆ.

ಇತ್ತೀಚೆಗೆ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ‌. ಮುಖಕ್ಕೆ ಮುಸುಕು ಧರಿಸಿ ಕಳ್ಳತನ ಮಾಡುತ್ತಿದ್ದ ಪ್ರಕರಣಗಳು ಮಾಸುವ ಮುನ್ನವೇ ಸಿ ಸಿ ಕ್ಯಾಮರಾ ಒಡೆದು ಮನೆ ಕಳ್ಳತನಕ್ಕೆ ಯತ್ನಿಸಿರುವ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

ಕಳ್ಳನ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹುಬ್ಬಳ್ಳಿಯ ಇಟಗಿ ಮಾರುತಿ ಗಲ್ಲಿಯಲ್ಲಿ ಮನೆಯ ಸಿಸಿಟಿವಿ ಒಡೆದು ಕಳ್ಳತನಕ್ಕೆ ಯತ್ನಿಸಿದವನನ್ನು ಸಾರ್ವಜನಿಕರೇ ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಕಳೆದ ಕೆಲ ದಿನಗಳಿಂದ ಇದೇ ಪ್ರದೇಶದಲ್ಲಿ ಸುಮಾರು ಕಳ್ಳತನ ನಡೆದಿದ್ದವು. ಕಳ್ಳರ ಕಾಟದಿಂದ ಬೇಸತ್ತಿದ್ದ ನಾಗರಿಕರು ಈಗ ಖದೀಮನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ‌.

ಇನ್ನೂ ಐದಾರು ಮನೆಗಳಿಗೆ ಕನ್ನ ಹಾಕಿದ್ದ ಖದೀಮರು, 25 ಸಾವಿರ ನಗದು ಸೇರಿ ಚಿನ್ನಾಭರಣ ದೋಚಿದ್ದರು. ಮತ್ತೊಮ್ಮೆ ಇದೇ ಪ್ರದೇಶದಲ್ಲಿ ಕಳ್ಳತನಕ್ಕೆ ಬಂದಿದ್ದ ಖದೀಮರು, ಸಿಸಿ ಕ್ಯಾಮರಾ ಒಡೆದು ಹಾಕಿ ಮನೆಗೆ ಕನ್ನ ಹಾಕಲು ಯತ್ನಿಸಿದ್ದಾರೆ. ಇದರ ಶಬ್ದ ಕೇಳಿ ಎಚ್ಚೆತ್ತ ನಾಗರಿಕರು, ಅಕ್ಕ-ಪಕ್ಕದವರ ನೆರವಿನಿಂದ ಕಳ್ಳನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಓರ್ವನನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ. ಆದರೆ ಮತ್ತಿಬ್ಬರು ಪರಾರಿಯಾಗಿದ್ದಾರೆ. 

ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದು, ಮಂಗಳವಾರಪೇಟೆ, ವೀರಾಪುರ ಓಣಿ ಮತ್ತಿತರ ಕಡೆ ಕಳ್ಳತನ ಮಾಡಿದ್ದರೆಂಬ ಮಾಹಿತಿ ಬಹಿರಂಗವಾಗಿದೆ. ಘಂಟಿಕೇರಿ ಠಾಣೆ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ‌.

ಇದನ್ನೂಓದಿ : ಯುಪಿ ಪೊಲೀಸರ ಎನ್​ಕೌಂಟರ್​ಗೆ 16 ಗ್ಯಾಂಗ್​ಸ್ಟರ್​ಗಳು ಬಲಿ: ಕ್ರಿಮಿನಲ್​ಗಳ 3,516 ಕೋಟಿ ಮೌಲ್ಯದ ಆಸ್ತಿ ವಶ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.