ಯುವತಿ ಕುತ್ತಿಗೆಯಿಂದ ಸರ ಕದಿಯುವಲ್ಲಿ ವಿಫಲ.. ಮಾರಕಾಸ್ತ್ರ ತೋರಿಸಿ ಪರಾರಿಯಾದ ಸರಗಳ್ಳ- ವಿಡಿಯೋದಲ್ಲಿ ಸೆರೆ - ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿ
🎬 Watch Now: Feature Video
ಬೆಂಗಳೂರು : ರಸ್ತೆಯಲ್ಲಿ ಸಾಗುತ್ತಿದ್ದ ಯುವತಿಯ ಸರಗಳ್ಳತನ ಮಾಡುವಲ್ಲಿ ಕಳ್ಳನೊಬ್ಬ ವಿಫಲನಾಗಿದ್ದು, ಸ್ಥಳದಿಂದ ತಪ್ಪಿಸಿಕೊಳ್ಳಲು ಮಾರಕಾಸ್ತ್ರ ತೋರಿಸಿ ಪರಾರಿಯಾದ ಘಟನೆ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸಿಂಗಾಪುರದಲ್ಲಿ ಜೂನ್ 25ರ ಸಂಜೆ 7.30ರ ಸುಮಾರಿಗೆ ನಡೆದಿದೆ. ಸ್ವಪ್ನಾ ಎಂಬುವವರ ಸರ ಕಸಿಯಲು ಆರೋಪಿ ಯತ್ನಿಸಿದ್ದಾನೆ. ಆದರೆ, ಆತನನ್ನು ಗಮನಿಸಿ ಕೂಗಿಕೊಂಡಿದ್ದರಿಂದ ಸರವನ್ನು ಕಸಿಯುವಲ್ಲಿ ಕಳ್ಳ ವಿಫಲವಾಗಿ, ಅಲ್ಲಿಂದ ಓಡಿದಾಗ ಸ್ವಪ್ನಾಳ ತಾಯಿ, ಸಹೋದರಿ ಕಳ್ಳ ಕಳ್ಳ ಎಂದು ಚೀರಿಕೊಂಡಿದ್ದಾರೆ. ಇದರಿಂದ ಭಯಭೀತನಾದ ಕಳ್ಳ ತಪ್ಪಿಸಿಕೊಳ್ಳಲು ತಾಯಿ, ಸಹೋದರಿಗೆ ಮಾರಕಾಸ್ತ್ರ ತೋರಿಸಿ ತಪ್ಪಿಸಿಕೊಂಡಿದ್ದಾನೆ. ಆರೋಪಿಯ ವಿಫಲಯತ್ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಘಟನೆ ಸಂಬಂಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಸರಗಳ್ಳತನ ಹೆಚ್ಚಾಗಿದೆ. ಒಂಟಿ ಮಹಿಳೆಯರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನೇ ಹೊಂಚು ಹಾಕುವ ಕಳ್ಳರು ಸರಿಯಾದ ಸಮಯ ನೋಡಿ ಸೀದಾ ಕುತ್ತಿಗೆಗೆ ಕೈ ಹಾಕಿ ಸರವನ್ನು ಕಿತ್ತು ಪರಾರಿಯಾಗುತ್ತಿದ್ದಾರೆ. ಪೊಲೀಸರೇನೋ ಕಳ್ಳರನ್ನು ಸೆರೆ ಹಿಡಿದು ಜೈಲಿನಲ್ಲಿರುಸುತ್ತಾರೆ. ಆದರೆ ಇಂಥವರೇ ಮತ್ತೆ ಮತ್ತೆ ಹುಟ್ಟಿಕೊಂಡು ಇದೇ ಅಪರಾಧ ಮುಂದುವರೆಸುತ್ತಿದ್ದಾರೆ.
ಇದನ್ನೂ ಓದಿ:Hit and Run: ಬೆಂಗಳೂರಿನಲ್ಲಿ ಹಿಟ್ ಆ್ಯಂಡ್ ರನ್ಗೆ ವ್ಯಕ್ತಿ ಬಲಿ