ಶಿವಮೊಗ್ಗದ ಆನಂದಪುರಂನಲ್ಲಿ ಅಂಗಡಿಗಳ ಸರಣಿ ಕಳ್ಳತನ: ಕೃತ್ಯ ಸಿಸಿಟಿವಿಯಲ್ಲಿ ಸೆರೆ - ಆನಂದಪುರಂ ಗ್ರಾಮ

🎬 Watch Now: Feature Video

thumbnail

By

Published : Jun 6, 2023, 4:09 PM IST

ಶಿವಮೊಗ್ಗ: ಆನಂದಪುರಂ ಗ್ರಾಮದಲ್ಲಿ ಅಂಗಡಿಗಳ ಸರಣಿ ಕಳ್ಳತನ ನಡೆದಿದೆ. ಶಿವಮೊಗ್ಗದಿಂದ ಸಾಗರಕ್ಕೆ ಸಾಗುವ ಮುಖ್ಯರಸ್ತೆಯಲ್ಲಿ ಇರುವ ಪ್ರಮುಖ ಗ್ರಾಮವೇ ಆನಂದಪುರಂ. ಇಲ್ಲಿ ಕಳೆದ ಭಾನುವಾರ ರಾತ್ರಿ ಸರಣಿ ಕಳ್ಳತನ ಜರುಗಿದೆ. ಬಟ್ಟೆ, ಬೀಡಾ ಹಾಗು ದಿನಸಿ ಅಂಗಡಿಗಳಲ್ಲಿ ರಾತ್ರಿ ವೇಳೆ ಕೃತ್ಯ ಎಸಗಿದ್ದು ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಂಗಡಿ‌ ಮುಂಭಾಗದ ಬಾಗಿಲು ಒಡೆದು ಒಳ ನುಗ್ಗಿದ ಕಳ್ಳ, ಕ್ಯಾಶ್ ಕೌಂಟರ್‌ನಲ್ಲಿದ್ದ ಹಣ, ಬಟ್ಟೆ ಕಳ್ಳತನ ಮಾಡಿದ್ದಾನೆ.

ಪೊಲೀಸರು ಗಸ್ತಿನಲ್ಲಿದ್ದರೂ ಕಳ್ಳತನ: ಗ್ರಾಮದಲ್ಲಿ ಉಪ ಠಾಣೆ ಉನ್ನತೀಕರಣಗೊಂಡು ಗ್ರಾಮಾಂತರ ಠಾಣೆಯಾದ ಬಳಿಕವೂ ಕಳ್ಳತನ ಪ್ರಕರಣಗಳು ಹೆಚ್ಚಾಗಿದೆ. 112 ವಾಹನ ಸಂಚಾರ ನಡೆಸುತ್ತಿದ್ದರೂ ಪ್ರಕರಣಗಳು ನಡೆಯುತ್ತಿವೆ ಎನ್ನುವುದು ಸಾರ್ವಜನಿಕರ ದೂರು. 

''ನಮ್ಮ ಬಟ್ಟೆ ಅಂಗಡಿಯೊಳಗೆ ಬಂದ ಕಳ್ಳ, ಕ್ಯಾಶ್ ಕೌಂಟರ್​​​ನಲ್ಲಿದ್ದ ಸುಮಾರು 13 ಸಾವಿರ ರೂ. ಹಣದ ಜೊತೆಗೆ ಬಟ್ಟೆಗಳನ್ನೂ ಕದ್ದುಕೊಂಡು ಹೋಗಿದ್ದಾನೆ. ಗ್ರಾಮದಲ್ಲಿ ಹಿಂದೆಯೂ ಅನೇಕ ಬಾರಿ ಕಳ್ಳತನ ನಡೆದಿದ್ದರೂ ಪೊಲೀಸರು ಆರೋಪಿಗಳನ್ನು ಸೆರೆ ಹಿಡಿದಿಲ್ಲ. ನಾವು ಅಂಗಡಿ ನಡೆಸಲು ಸಾಲ ಮಾಡಿದ್ದೇವೆ" ಎಂದು ಮಾಲೀಕ ಅಶೀಕ್ ಹೇಳಿದರು.

ಇದನ್ನೂ ಓದಿ: ಪೋಕ್ಸೋ ಕಾಯಿದೆಯ ಸೆಕ್ಷನ್ 19ರ ಕಟ್ಟುನಿಟ್ಟಿನ ಜಾರಿಗೆ ಸರ್ಕಾರಕ್ಕೆ ನಿರ್ದೇಶನ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.