Ludhiana Robbery: ಚರಂಡಿ ನೀರಿಗೆ ಎಸೆದಿದ್ದ ಕ್ಯಾಮೆರಾ ಡಿವಿಆರ್ ಪೊಲೀಸ್ ವಶಕ್ಕೆ.. ಆರೋಪಿಗಳಿಂದ ₹ 7 ಕೋಟಿಗೂ ಅಧಿಕ ಹಣ ಜಪ್ತಿ
🎬 Watch Now: Feature Video
ಲೂಧಿಯಾನ (ಪಂಜಾಬ್): ಬಹು ಕೋಟಿ ದರೋಡೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಲುಧಿಯಾನ ಪೊಲೀಸರು ಕ್ಯಾಮೆರಾಗಳ ಡಿವಿಆರ್ಗಳನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಈ ಡಿವಿಆರ್ಗಳು ಬರ್ನಾಲಾದ ರೇಖಾಕ್ರಿವಾಲಾ ರಸ್ತೆಯಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ಚರಂಡಿ ನೀರಿನಲ್ಲಿ ಪತ್ತೆಯಾಗಿದೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 18 ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಆರೋಪಿಗಳಿಂದ ಸುಮಾರು 7 ಕೋಟಿ 14 ಲಕ್ಷ 700 ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ. ಇದಲ್ಲದೇ ಪೊಲೀಸರು ಅವರನ್ನು ಕೋರ್ಟ್ಗೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಮನವಿ ಮಾಡಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಗಳ ವಿಚಾರಣೆ ನಡೆಯುತ್ತಿದ್ದು, ಒಂದರ ಹಿಂದೆ ಒಂದರಂತೆ ಮಾಹಿತಿಗಳು ಬಹಿರಂಗವಾಗುತ್ತಿವೆ ಎಂದು ಪೊಲೀಸ್ ಕಮಿಷನರ್ ಮನ್ದೀಪ್ ಸಿಧು ಹೇಳಿದ್ದಾರೆ.
ಪೊಲೀಸರನ್ನು ದಾರಿ ತಪ್ಪಿಸಲು ದರೋಡೆಕೋರರ ಸಂಚು: ಲೂಧಿಯಾನ ಪೊಲೀಸ್ ಕಮಿಷನರ್ ಮನ್ದೀಪ್ ಸಿಧು ಅವರು ಈ ಕುರಿತು ಮಾತನಾಡಿ, ಪೊಲೀಸರನ್ನು ದಾರಿ ತಪ್ಪಿಸಲು ದರೋಡೆಕೋರರು ಯಾವುದೇ ಅವಕಾಶವನ್ನು ಬಿಟ್ಟಿಲ್ಲ. ಆದರೆ ನಮ್ಮ ತಂಡವು ವಿಷಯವನ್ನು ಅರ್ಥಮಾಡಿಕೊಳ್ಳಲು ಹಗಲಿರುಳು ಶ್ರಮಿಸಿದೆ. ದರೋಡೆಗೆ ಬಳಸಿದ್ದ ಕಾರು ಹಾಗೂ ದ್ವಿಚಕ್ರ ವಾಹನವನ್ನು ನಮ್ಮ ಪೊಲೀಸ್ ತಂಡ ವಶಪಡಿಸಿಕೊಂಡಿದೆ. ಮಣಿಂದರ್ ಸಿಂಗ್ ಅಲಿಯಾಸ್ ಮಣಿಯಿಂದ 1.5 ಕೋಟಿ ರೂ., ಮಂದೀಪ್ ಸಿಂಗ್ ಅಲಿಯಾಸ್ ವಿಕ್ಕಿಯಿಂದ 50 ಲಕ್ಷ ರೂ., ಹರ್ವಿಂದರ್ ಸಿಂಗ್, ಪರಮ್‌ಜಿತ್ ಸಿಂಗ್, ಹರ್‌ಪ್ರೀತ್ ಸಿಂಗ್ ಮತ್ತು ನರೀಂದರ್ ಸಿಂಗ್ ಅವರಿಂದ 75 ಲಕ್ಷ ರೂ. ಸೇರಿದಂತೆ ಬಂಧಿತ 18 ಆರೋಪಿಗಳಿಂದ ಇದುವರೆಗೆ ಏಳು ಕೋಟಿಗೂ ಅಧಿಕ ಮೊತ್ತವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಮಿಷನರ್ ಮಾಹಿತಿ ನೀಡಿದರು.
ಓದಿ: Ludhiana robbery: ಬರೋಬ್ಬರಿ ₹ 8.5 ಕೋಟಿ ದರೋಡೆ ಪ್ರಕರಣ.. ಮೂವರು ಆರೋಪಿಗಳು ವಶಕ್ಕೆ