ಭೀಕರ ಅಪಘಾತ... ಬಾವಿಗೆ ಬಿದ್ದ ಕಾರು: 6 ಮಂದಿ ಸಾವು, ಮೂವರಿಗೆ ಗಾಯ - ಕಾರೊಂದು ಬಾವಿಗೆ
🎬 Watch Now: Feature Video
ಜಾರ್ಖಂಡ್: ಕಾರೊಂದು ಬಾವಿಗೆ ಬಿದ್ದು 6 ಜನರು ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಜಾರಿಬಾಗ್ನ ರೋಮಿ ಗ್ರಾಮದಲ್ಲಿ ನಡೆದಿದೆ. ಮಧ್ಯಾಹ್ನ 1:30ರ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ಸ್ಥಳೀಯ ಪೊಲೀಸರು ಮತ್ತು ಗ್ರಾಮಸ್ಥರು 3 ಜನರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 33ರಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ಬೈಕ್ಗೆ ಡಿಕ್ಕಿ ಹೊಡೆದು ಬಳಿಕ ಬಾವಿಗೆ ಬಿದ್ದಿದೆ. ಈ ಘಟನೆಯಲ್ಲಿ ಒಂದು ಮಗು ಸೇರಿದಂತೆ ಆರು ಜನರು ಸಾವನ್ನಪ್ಪಿದ್ದಾರೆ.
ಮೃತರನ್ನು ಮಂಡೈ ಗ್ರಾಮದವರು ಎಂದು ಗುರುತಿಸಲಾಗಿದೆ. ಎರಡು ದಿನಗಳ ಹಿಂದೆ ದರ್ಭಾಂಗದ ದೇವಸ್ಥಾನಕ್ಕೆ ಇವರೆಲ್ಲ ತೆರಳಿದ್ದರು, ಇಂದು ಮರಳಿ ಮನೆಗೆ ವಾಪಸ್ ಆಗುವಾಗ ಈ ದುರ್ಘಟನೆ ಸಂಭವಿಸಿದೆ. ಸ್ಥಳೀಯರು ಮತ್ತು ಪೊಲೀಸರು ಕ್ರೇನ್ ಸಹಾಯದಿಂದ ಕಾರನ್ನು ಬಾವಿಯಿಂದ ಹೊರತೆಗೆದಿದ್ದಾರೆ. ಸದ್ಯ ಮೂವರು ಗಾಯಾಳುಗಳು ಹಜಾರಿಬಾಗ್ನ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: Watch.. ಸ್ಕಿಡ್ ಆಗಿ ವೇಗದಲ್ಲಿ ಬಂದು ಗುದ್ದಿದ ಕಾರು: ತಾಯಿ, ಮಗಳು ಸೇರಿ ಮೂವರ ದುರ್ಮರಣ.. ಸಿಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ