Shocking! ಟೋಲ್ ಸಿಬ್ಬಂದಿಯ ಮೇಲೆಯೇ ಕಾರು ಹರಿಸಿದ ಚಾಲಕ: ವಿಡಿಯೋ - etv bharat kannada
🎬 Watch Now: Feature Video
ಉತ್ತರಪ್ರದೇಶ: ಟೋಲ್ ಪ್ಲಾಜಾದ ಸಿಬ್ಬಂದಿಯ ಮೈಮೇಲೆ ಚಾಲಕನೊಬ್ಬ ಕಾರು ಹರಿಸಿ ಅಟ್ಟಹಾಸ ಮೆರೆದ ಘಟನೆ ಉತ್ತರ ಪ್ರದೇಶದ ಹಾಪುರ್ನಲ್ಲಿ ಇಂದು ನಡೆದಿದೆ. ಟೋಲ್ ಕಟ್ಟುವಂತೆ ಹೇಳಿದರೂ ಕಟ್ಟದೇ ಅಲ್ಲಿಂದ ಚಾಲಕ ಪರಾರಿಯಾಗಲು ಯತ್ನಿಸಿದ್ದ. ಇದನ್ನು ಕಂಡ ಸಿಬ್ಬಂದಿ ಕಾರು ಹಿಂಬಾಲಿಸಿ ತಡೆಯಲು ಪ್ರಯತ್ನಿಸಿದ್ದರು. ಕೋಪಗೊಂಡ ಚಾಲಕ ಯೂಟರ್ನ್ ಮಾಡಿಕೊಂಡು ಬಂದು ಟೋಲ್ ಸಿಬ್ಬಂದಿಯ ಮೇಲೆಯೇ ಕಾರು ಚಲಾಯಿಸಿದ್ದಾನೆ. ಇಡೀ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಕುರಿತು ಎಎಸ್ಪಿ ವರುಣ್ ಮಿಶ್ರಾ ಮಾತನಾಡಿ, "ಇಂದು ಬೆಳಗ್ಗೆ 10 ಗಂಟೆಗೆ ನಡೆದ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿದೆ. ಪಿಲಾಖುವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ. ಆರೋಪಿ ಚಾಲಕ ಉದ್ದೇಶಪೂರ್ವಕವಾಗಿ ಟೋಲ್ ಪ್ಲಾಜಾದ ಸಿಬ್ಬಂದಿಯ ಮೇಲೆ ಕಾರು ಹರಿಸಿದ್ದಾನೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ನಾವು ಸಂಬಂಧಿತ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದೇವೆ. ಆರೋಪಿಯನ್ನು ಬಂಧಿಸಲು ಶೋಧ ನಡೆಯುತ್ತಿದೆ" ಎಂದರು.
ಗಂಭೀರವಾಗಿ ಗಾಯಗೊಂಡ ಸಿಬ್ಬಂದಿಯನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಹೊಸಕೋಟೆ: ಬೈಕ್ಗಳಿಗೆ ಡಿಕ್ಕಿ ಹೊಡೆದು ಮರಕ್ಕೆ ಗುದ್ದಿದ ಕಾರು.. ಸಿಸಿಟಿವಿ ವಿಡಿಯೋ