ಹಳೆ ದ್ವೇಷಕ್ಕೆ ಕಾರು ಹರಿಸಿ ಬಾಲಕನ ಕೊಂದ ಕೀಚಕ.. ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ - Murder charges against man who killed the boy
🎬 Watch Now: Feature Video
Published : Sep 10, 2023, 9:33 PM IST
ತಿರುವನಂತಪುರಂ (ಕೇರಳ) : ಹತ್ತನೇ ತರಗತಿ ಬಾಲಕನ ಮೇಲೆ ಕಾರು ಹರಿಸಿ ಕೊಲೆಗೈದ ಆರೋಪದ ಮೇಲೆ ಕಾರು ಚಾಲಕನ ವಿರುದ್ಧ ಕೇರಳ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ. ಮೃತ ಬಾಲಕನನ್ನು ಆದಿಶೇಖರ್ ಎಂದು ಗುರುತಿಸಲಾಗಿದೆ. ಪ್ರಿಯರಂಜನ್ ಕೊಲೆಗೈದ ಆರೋಪಿ ಎಂದು ತಿಳಿದುಬಂದಿದೆ.
ಕಳೆದ ಆಗಸ್ಟ್ 30ರಂದು ಇಲ್ಲಿನ ಪೂವಾಚಲ ಎಂಬಲ್ಲಿ ಬಾಲಕ ಆದಿಶೇಖರ್ ಮೇಲೆ ಪ್ರಿಯರಂಜನ್ ತನ್ನ ಕಾರು ಚಲಾಯಿಸಿದ್ದು, ಬಾಲಕ ಮೃತಪಟ್ಟಿದ್ದ. ಈ ಅಪಘಾತದ ದೃಶ್ಯ ಇಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಬಳಿಕ ಆರೋಪಿ ಪ್ರಿಯರಂಜನ್ ಪರಾರಿಯಾಗಿದ್ದ. ಅಲ್ಲದೆ ಆರೋಪಿಯು ಬಾಲಕನಿಗೆ ದೂರದ ಸಂಬಂಧಿ ಎಂದು ತಿಳಿದುಬಂದಿದೆ. ಕೃತ್ಯದ ಸಿಸಿಟಿವಿ ದೃಶ್ಯಗಳು ಹೊರಬರುತ್ತಿದ್ದಂತೆ ಪೊಲೀಸರು ಈ ಸಂಬಂಧ ಆರೋಪಿ ಪ್ರಿಯರಂಜನ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈತನ ವಿರುದ್ಧ ಸೆಕ್ಷನ್ 302ರಡಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಆರೋಪಿಯು ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿಯೊಬ್ಬರು, ಪ್ರಕರಣ ಸಂಬಂಧ ಮೊದಲು ನಾವು ಅಪಘಾತ ಪ್ರಕರಣ ದಾಖಲಿಸಿಕೊಂಡಿದ್ದೆವು. ಬಾಲಕನ ಅಂತ್ಯಕ್ರಿಯೆ ನಂತರ ಸಂಬಂಧಿಕರು ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ಈ ವೇಳೆ ನಾವು ಘಟನೆ ನಡೆದ ಸ್ಥಳದಲ್ಲಿನ ಸಿಸಿಟಿವಿ ದೃಶ್ಯವನ್ನು ಪರಿಶೀಲಿಸಿದೆವು. ಈ ಸಂಬಂಧ ಆರೋಪಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. ಹಳೆ ದ್ವೇಷದ ಹಿನ್ನೆಲೆ ಆರೋಪಿ ಕೃತ್ಯ ಎಸಗಿರುವುದಾಗಿ ತಿಳಿದುಬಂದಿದೆ ಎಂದು ಮಾಹಿತಿ ನೀಡಿದರು. ಕೆಲವು ತಿಂಗಳ ಹಿಂದೆ ಇಲ್ಲಿನ ದೇವಾಲಯದ ಬಳಿ ಪ್ರಿಯರಂಜನ್ ಮೂತ್ರ ವಿಸರ್ಜನೆ ಮಾಡುವಾಗ ಬಾಲಕ ಪ್ರಶ್ನಿಸಿದ್ದ. ಈ ಸಂಬಂಧ ಬಾಲಕನ ಮೇಲೆ ಆರೋಪಿ ದ್ವೇಷ ಸಾಧಿಸಿದ್ದಾನೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ವಿರಾಟ್ ಕೊಹ್ಲಿಗೆ ಬೆಳ್ಳಿಯ ಬ್ಯಾಟ್ ಉಡುಗೊರೆ ನೀಡಿದ ಶ್ರೀಲಂಕಾ ಯುವ ಕ್ರಿಕೆಟಿಗ