ಫೈನಲ್ ಪಂದ್ಯಕ್ಕಾಗಿ ಝಗಮಗಿಸುವ ಲೇಸರ್ ಶೋ; ಮೋದಿ ಸ್ಟೇಡಿಯಂನಲ್ಲಿ ಬೆಳಕಿನ ಹಬ್ಬ - laser show in modi stadium
🎬 Watch Now: Feature Video
Published : Nov 18, 2023, 7:39 PM IST
ಕೊಲ್ಲಾಪುರ/ ಗಾಂಧಿನಗರ: ಅಹಮದಾಬಾದ್ನಲ್ಲಿ ಭಾನುವಾರ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ವಿಶ್ವಕಪ್ ಕ್ರಿಕೆಟ್ ಟೂರ್ನಿ ಫೈನಲ್ ಪಂದ್ಯ ನಡೆಯುತ್ತಿದ್ದು, ಇದಕ್ಕಾಗಿ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ಸಜ್ಜುಗೊಂಡಿದೆ. ಫೈನಲ್ ಪಂದ್ಯದ ನಿಮಿತ್ತ ಕೊಲ್ಲಾಪುರದ ಯುವಕರು ಬೆಳಕಿನ ಪ್ರದರ್ಶನ ಮತ್ತು ಲೇಸರ್ ಶೋ ಆಯೋಜಿಸಿದ್ದು ಕಣ್ಮನ ಸೆಳೆಯುತ್ತಿದೆ. ಫೈನಲ್ ಪಂದ್ಯದ ವೀಕ್ಷಣೆಗೆ ಜಗತ್ತೇ ಕಾದು ಕುಳಿತಿದ್ದು, ವಿಶ್ವದ ಅತಿ ದೊಡ್ಡ ಕ್ರೀಡಾಂಗಣವು ಗಣ್ಯಾತಿಗಣ್ಯರ ಸಮಾಗಮಕ್ಕೆ ಸಾಕ್ಷಿಯಾಗಲಿದೆ. ಈ ನಡುವೆ ಕೊಲ್ಲಾಪುರದ ಯುವಕರು ಪ್ರದರ್ಶಿಸುವ ಲೇಸರ್ ಶೋ ಹಾಗೂ ಲೈಟ್ ಎಫೆಕ್ಟ್ ವಿಶೇಷ ಆಕರ್ಷಣೆಯಾಗಲಿದೆ.
ಈ ವರೆಗಿನ ವಿಶ್ವಕಪ್ ಇತಿಹಾಸದಲ್ಲಿ ಎರಡು ಬಾರಿ ಚಾಂಪಿಯನ್ ಆಗಿರುವ ಭಾರತ ತಂಡ ನಾಲ್ಕನೇ ಬಾರಿ ಫೈನಲ್ ಪ್ರವೇಶಿಸಿದರೆ, ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ, ಎಂಟನೇ ಬಾರಿ ಫೈನಲ್ ಪಂದ್ಯದಲ್ಲಿ ಆಡುತ್ತಿದೆ. 2003ರ ಫೈನಲ್ ಪಂದ್ಯದಲ್ಲಿ ಇತ್ತಂಡಗಳು ಮುಖಾಮುಖಿಯಾಗಿದ್ದವು. 20 ವರ್ಷಗಳ ಬಳಿಕ ಮತ್ತೆ ಮುಖಾಮುಖಿಯಾಗುತ್ತಿವೆ. ಹಾಗಾಗಿ ನಾಳೆಯ ಈ ಫೈನಲ್ ಪಂದ್ಯ ಜನಮಾನಸದಲ್ಲಿ ಅಜರಾಮರವಾಗಿ ಉಳಿಸಿಕೊಳ್ಳುವ ಸಲುವಾಗಿ ಹಲವು ಮನರಂಜನಾ ಕಾರ್ಯಕ್ರಮಗಳು ನಡೆಯಲಿದೆ. ಪಂದ್ಯಕ್ಕೂ ಮೊದಲು ಭಾರತೀಯ ವಾಯುಪಡೆಯ ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡದಿಂದ ರೋಮಾಂಚಕ ಏರ್ ಶೋ, ಮೊದಲ ಇನ್ನಿಂಗ್ಸ್ ವಿರಾಮದಲ್ಲಿ ಆದಿತ್ಯ ಗಾಧ್ವಿ ಅವರಿಂದ ಮನರಂಜನಾ ಕಾರ್ಯಕ್ರಮ, 2ನೇ ಇನಿಂಗ್ಸ್ ವಿರಾಮದಲ್ಲಿ ಈ ಲೇಸರ್ ಮತ್ತು ಲೈಟ್ ಶೋ ನಡೆಯಲಿದೆ.
ಇದನ್ನೂ ಓದಿ: ವಿಶ್ವಕಪ್ ಫೈನಲ್‌ಗೂ ಮುನ್ನ ವಾಯುಪಡೆಯ ಸೂರ್ಯಕಿರಣ್ ತಂಡದಿಂದ ಆಕರ್ಷಕ ಏರ್‌ಶೋ