ಹಾವೇರಿ: ಮುಂದುವರಿದ ಕಾಡಾನೆ ಹಾವಳಿ, ಕಟಾವಿಗೆ ಬಂದ ಬೆಳೆ ನಾಶ VIDEO - ಅರಣ್ಯ ಇಲಾಖೆಯ ಸಿಬ್ಬಂದಿ
🎬 Watch Now: Feature Video
Published : Nov 25, 2023, 12:58 PM IST
ಹಾವೇರಿ: ಜಿಲ್ಲೆಯ ಹಾನಗಲ್ ತಾಲೂಕಿನ ವಿವಿಧ ಗ್ರಾಮಗಳ ರೈತರ ಜಮೀನುಗಳಲ್ಲಿ ಕಾಡಾನೆಗಳ ಹಾವಳಿ ಮುಂದುವರೆದಿದೆ. ಸದ್ಯ ಗೊಂದಿ ಗ್ರಾಮದ ಬಳಿ ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿದೆ. ಗೊಂದಿ ಗ್ರಾಮದ ರೈತ ರವೀಂದ್ರಗೌಡ ಪಾಟೀಲ್ ಎಂಬುವರ ಜಮೀನಿನಲ್ಲಿನ ಭತ್ತದ ಬೆಳೆಯನ್ನು ಕಾಡಾನೆಗಳ ಹಿಂಡು ಹಾಳು ಮಾಡಿದೆ. ಕಳೆದ ನಾಲ್ಕೈದು ದಿನಗಳಿಂದ ಹಾನಗಲ್ ತಾಲೂಕಿನ ಹಲವು ಗ್ರಾಮಗಳಲ್ಲಿ ಆನೆಗಳ ಹಾವಳಿ ಅಧಿಕವಾಗಿದ್ದು, ನಾಲ್ಕು ಆನೆಗಳ ಹಿಂಡು ಜಮೀನುಗಳಲ್ಲಿ ಬೀಡುಬಿಟ್ಟಿದ್ದು ಹಾನಗಲ್ ತಾಲೂಕಿನ ರೈತರು ಆತಂಕದಲ್ಲಿದ್ದಾರೆ.
ಆನೆಗಳ ಹಿಂಡು ಕಟಾವಿಗೆ ಬಂದ ಲಕ್ಷಾಂತರ ಮೌಲ್ಯದ ಭತ್ತ, ಕಬ್ಬು ಬೆಳೆಗಳನ್ನೇ ನಾಶ ಮಾಡಿವೆ. ಉತ್ತರಕನ್ನಡ ಜಿಲ್ಲೆಯ ಅರಣ್ಯ ಪ್ರದೇಶದಿಂದ ನಾಲ್ಕು ಆನೆಗಳ ಹಿಂಡು ಆಗಮಿಸಿದ್ದು ದಿನದಿಂದ ದಿನಕ್ಕೆ ರೈತರ ಬೆಳೆಗಳು ಹಾಳಾಗಲಾರಂಭಿಸಿವೆ. ಕಾಡಾನೆಗಳನ್ನು ಓಡಿಸಲು ಅರಣ್ಯ ಇಲಾಖೆಯ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ. ರಾತ್ರಿ ಬೆಂಕಿ ಹಚ್ಚಿ ಕುಳಿತುಕೊಂಡರೂ ಆನೆಗಳು ಕದಲದೇ ಇರುವುದು ಅರಣ್ಯ ಇಲಾಖೆಯ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದೆ.
ಇದನ್ನೂ ನೋಡಿ: ಚಿಕ್ಕಮಗಳೂರಿನಲ್ಲಿ ಕಾಡಾನೆ ದಾಳಿಗೆ ಮಹಿಳೆ ಸಾವು: ಮೃತಳ ಕುಟುಂಬಕ್ಕೆ ₹15 ಲಕ್ಷ ಪರಿಹಾರ