Watch... ಕೇರಳ ಬಟೆಜ್ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರಿಂದ ಕೊಚ್ಚಿಯಲ್ಲಿ ಪ್ರತಿಭಟನೆ - etv bharat kannada
🎬 Watch Now: Feature Video
ಕೊಚ್ಚಿ: ಕೇರಳ ಸರ್ಕಾರ ಮಂಡಿಸಿರುವ ಬಜೆಟ್ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಕೊಚ್ಚಿಯಲ್ಲಿ ಪ್ರತಿಭಟನೆ ನಡೆಸಿದರು. ಅವರನ್ನು ಚದುರಿಸಲು ಪೊಲೀಸರು ಜಲಫಿರಂಗಿ ಮತ್ತು ಅಶ್ರುವಾಯು ಪ್ರಯೋಗಿಸಿದ್ದಾರೆ. ಈ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೇರಳ ಬಜೆಟ್ 2023-24 ಅನ್ನು ರಾಜ್ಯ ಹಣಕಾಸು ಸಚಿವ ಕೆಎನ್ ಬಾಲಗೋಪಾಲ್ ಫೆಬ್ರವರಿ 3 ರಂದು ಮಂಡಿಸಿದ್ದರು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸರ್ಕಾರವು ಬಜೆಟ್ನಲ್ಲಿ ಇಂಧನ, ಮದ್ಯ ಹಾಗೂ ಇನ್ನಿತರ ಕೆಲ ವಸ್ತುಗಳ ಮೇಲೆ ಸಾಮಾಜಿಕ ಭದ್ರತೆ ಸೆಸ್ ವಿಧಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಸೆಸ್ ಏರಿಕೆಯಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್ಗೆ 2 ರೂಪಾಯಿ ಹೆಚ್ಚಳವಾಗಲಿದೆ. ಇನ್ನು ಮದ್ಯದ ಬೆಲೆಯಲ್ಲೂ ಭಾರಿ ಏರಿಕೆ ಆಗಲಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ: ತಿಂಥಣಿ: ಕೈಲಾಸ ಕಟ್ಟೆಯಲ್ಲಿ ಕುಳಿತು ಗಾಂಜಾ ಸೇದಿದ ಸಾಧುಗಳು