'ಇದು ಜನರ ಜಿ20, ಭಾರತದ ರಾಜತಾಂತ್ರಿಕ ಗೆಲುವು': ಕಾಂಗ್ರೆಸ್ ಸಂಸದ ಶಶಿ ತರೂರ್ ಮೆಚ್ಚುಗೆ
🎬 Watch Now: Feature Video
ನವದೆಹಲಿ : ನವದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆ ಅತ್ಯಂತ ಯಶಸ್ವಿಯಾಗಿದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಪ್ರಶಂಸಿಸಿದ್ದಾರೆ. ಭಾನುವಾರ ಮಾತನಾಡಿದ ಅವರು, "ನಾನು ಜಿ20 ಶೆರ್ಪಾ ಅಮಿತಾಭ್ ಕಾಂತ್ ಮತ್ತು ನಮ್ಮ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರೊಂದಿಗೆ ಸಂಪರ್ಕದಲ್ಲಿದ್ದೇನೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಅವರನ್ನು ಅಭಿನಂದಿಸುತ್ತೇನೆ. ಏಕೆಂದರೆ ಅವರು ದೇಶಕ್ಕೆ ತುಂಬಾ ಒಳ್ಳೆಯ ಕೆಲಸ ಮಾಡಿದ್ದಾರೆ. ಇದು ಜನರ ಜಿ20 ಆಗಿತ್ತು. ಭಾರತದ ರಾಜತಾಂತ್ರಿಕ ಗೆಲುವು" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಈ ಹಿಂದಿನ ಯಾವುದೇ ಜಿ20 ಅಧ್ಯಕ್ಷರು ಮಾಡದ ಕೆಲಸ ಮಾಡಿದ್ದಾರೆ. ಜಿ20ಯನ್ನು ರಾಷ್ಟ್ರವ್ಯಾಪಿ ದೊಡ್ಡ ಕಾರ್ಯಕ್ರಮವಾಗಿಸಿದ್ದಾರೆ. 58 ನಗರಗಳಲ್ಲಿ 200 ಸಭೆಗಳೂ ಸೇರಿದಂತೆ ವಿವಿಧ ಸಾರ್ವಜನಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜಿ20ಯನ್ನು ಒಂದು ರೀತಿಯ ಜನರ ಜಿ20 ಆಗಿ ಪರಿವರ್ತಿಸಿದರು ಎಂದರು.
ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಕುರಿತು ಮಾತನಾಡಿದ ತರೂರ್, "ಭಾರತದ ಮಧ್ಯಪ್ರಾಚ್ಯ ಇಯು (EU) ಉಪಕ್ರಮವು ಸಂಪೂರ್ಣವಾಗಿ ಹೊಸದು. ಇದು ಮೊದಲೇ ನಿರೀಕ್ಷಿತವಾದದ್ದಲ್ಲ, ಸ್ವಾಗತಾರ್ಹ ಉಪಕ್ರಮ ಎಂದಿದ್ದಾರೆ. ಉಕ್ರೇನ್ನಲ್ಲಿ ನ್ಯಾಯಸಮ್ಮತ ಮತ್ತು ಶಾಶ್ವತವಾದ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಜಿ20 ದೇಶಗಳು ಒಗ್ಗಟ್ಟಾಗಿವೆ ಎಂದು ಹೇಳುವ ನವದೆಹಲಿ ಘೋಷಣೆ ನಿಜವಾಗಿಯೂ ತುಂಬಾ ಪ್ರಭಾವಶಾಲಿಯಾಗಿದೆ, ಈ ಅಸಾಧ್ಯವಾದ ಕೆಲಸವನ್ನು ಸಾಧಿಸುವುದು ನಿಜಕ್ಕೂ ವಿಶೇಷ ಸಾಧನೆ ಎಂದು ಕೊಂಡಾಡಿದ್ದಾರೆ.
ಇದನ್ನೂ ಓದಿ : ಜಿ20 ನಾಯಕರ ಭೋಜನಕ್ಕೆ ಚಿನ್ನ, ಬೆಳ್ಳಿ ಲೇಪಿತ ತಟ್ಟೆಗಳ ಬಳಕೆ: ಶರದ್ ಪವಾರ್ ಆಕ್ಷೇಪ