ಗುಲ್ಮಾರ್ಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಖಾಸಗಿ ಭೇಟಿ..! - ಲಾಲ್ಚೌಕ್ನಲ್ಲಿ ಧ್ವಜಾರೋಹಣ
🎬 Watch Now: Feature Video
ಗುಲ್ಮರ್ಗ್ (ಜಮ್ಮು ಮತ್ತು ಕಾಶ್ಮೀರ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಕಾಶ್ಮೀರದ ಪ್ರವಾಸಿ ತಾಣ ಗುಲ್ಮಾರ್ಗ್ಗೆ ಆಗಮಿಸಿದ್ದು, ಇದು ಅವರ ಖಾಸಗಿ ಭೇಟಿಯಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಮಧ್ಯಾಹ್ನ ಶ್ರೀನಗರದಿಂದ ನೇರವಾಗಿ ಗುಲ್ಮಾರ್ಗ್ಗೆ ಕಾಂಗ್ರೆಸ್ ನಾಯಕ ಆಗಮಿಸಿದ್ದಾರೆ. ಮೂರು ದಿನಗಳ ಕಾಲ ರಾಹುಲ್ ಗಾಂಧಿ ಇಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಇದೊಂದು ಖಾಸಗಿ ಭೇಟಿಯಾದ ಕಾರಣ ಸಾಮಾನ್ಯ ಭದ್ರತ ವ್ಯವಸ್ಥೆಯನ್ನು ಮಾಡಲಾಗಿದೆ.
ಮೂಲಗಳ ಪ್ರಕಾರ ಖಾಸಗಿ ಸಮಾರಂಭದಲ್ಲಿ ಪಾಲ್ಗೊಳ್ಳಲು ರಾಹುಲ್ ಇಲ್ಲಿಗೆ ಆಗಮಿಸಿದ್ದು, ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಅವರು ರಾಹುಲ್ ಗಾಂಧಿ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ ಎನ್ನಾಲಾಗಿದೆ. ಇನ್ನು ಕನ್ಯಾಕುಮಾರಿಯಿಂದ ಪ್ರಾರಂಭವಾದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಕೆಲ ದಿನಗಳ ಹಿಂದೆಯೇ ಶ್ರೀನಗರಕ್ಕೆ ತಲುಪಿ ಲಾಲ್ಚೌಕ್ನಲ್ಲಿ ಧ್ವಜಾರೋಹಣ ಮಾಡುವ ಮೂಲಕ ಮುಕ್ತಾಯ ಗೊಂಡಿತ್ತು ಕಾಶ್ಮೀರದಲ್ಲಿ ಮುಕ್ತಾಯಗೊಂಡಿತ್ತು. ಇನ್ನು ಈ ಬಗ್ಗೆ ರಾಹುಲ್ ಗಾಂಧಿ ಅವರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇದನ್ನೂ ಓದಿ: ಮಕ್ಕಳಂತೆ ಹಿಮದಲ್ಲಿ ಆಟವಾಡಿದ ರಾಹುಲ್ ಗಾಂಧಿ - ಸಹೋದರಿ ಪ್ರಿಯಾಂಕಾ