ಡಾ.ಜಿ.ಪರಮೇಶ್ವರ್ ಕಾಲುಮುಟ್ಟಿ ಆಶೀರ್ವಾದ ಪಡೆದ ಬಿ.ವೈ.ವಿಜಯೇಂದ್ರ- ವಿಡಿಯೋ - ವಿಧಾನಸಭಾ ಚುನಾವಣೆ
🎬 Watch Now: Feature Video
ಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ದಿನೇ ದಿನೇ ಹೆಚ್ಚಾಗುತ್ತಿದೆ. ರಾಜಕೀಯ ಪಕ್ಷಗಳ ನಡುವೆ ಪೈಪೋಟಿ ತೀವ್ರವಾಗುತ್ತಿದೆ. ಪರಸ್ಪರ ಆರೋಪ-ಪ್ರತ್ಯಾರೋಪಗಳ ಸುರಿಮಳೆಯಾಗುತ್ತಿದೆ. ವಿವಿಧ ಪಕ್ಷಗಳ ರಾಜಕೀಯ ನಾಯಕರು ಬಿರುಸಿನ ಮತಬೇಟೆ ಮಾಡುತ್ತಿದ್ದಾರೆ. ಇದರ ನಡುವೆ ಶಿಕಾರಿಪುರ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗು ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ ಅವರು ಕಾಂಗ್ರೆಸ್ ಹಿರಿಯ ನಾಯಕ ಹಾಗು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಕಾಲುಮುಟ್ಟಿ ಆಶೀರ್ವಾದ ಪಡೆದ ಕುತೂಹಲಕಾರಿ ಪ್ರಸಂಗ ನಡೆಯಿತು.
ರಾಜಕೀಯವೇ ಬೇರೆ, ವೈಯಕ್ತಿಕ ಸಂಬಂಧಗಳೇ ಬೇರೆ ಎನ್ನುವುದು ಆಗಾಗ ರಾಜಕಾರಣದಲ್ಲಿ ಆಗಾಗ್ಗೆ ಪುನರಾವರ್ತನೆಯಾಗುತ್ತದೆ. ಇಂದೂ ಕೂಡ ಅಂತಹದ್ದೇ ಘಟನೆ ಎಡೆಯೂರಿನ ದೇವಸ್ಥಾನದಲ್ಲಿ ಜರುಗಿತು. ಪರಸ್ಪರ ಎದುರಾಳಿ ಪಕ್ಷದಲ್ಲಿರುವ ಡಾ.ಜಿ.ಪರಮೇಶ್ವರ್ ಮತ್ತು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ದೇವಸ್ಥಾನದಲ್ಲಿ ಒಟ್ಟಿಗೆ ಆಕಸ್ಮಿಕವಾಗಿ ಮುಖಾಮುಖಿಯಾದರು. ಈ ಸಂದರ್ಭದಲ್ಲಿ ರಾಜಕಾರಣ ಮರೆತು ಇಬ್ಬರೂ ಸ್ನೇಹಪರವಾಗಿ ನಡೆದುಕೊಂಡರು. ವಿಜಯೇಂದ್ರ ಹಿರಿಯರಾಗಿರುವ ಪರಮೇಶ್ವರ್ ಕಾಲುಮುಟ್ಟಿ ನಮಸ್ಕರಿಸಿದ್ದು, ವಿಶೇಷವಾಗಿತ್ತು.
ಇದನ್ನೂ ಓದಿ: ಅಸಮಾಧಾನಿತರ ಮನವೊಲಿಕೆ ಯತ್ನ: ನೆಹರೂ ಓಲೇಕಾರ್ ಜೊತೆ ಬಿಎಸ್ವೈ ಮಾತುಕತೆ