ಹೆಲ್ಮೆಟ್ ಒಳಗೆ ಅವಿತಿದ್ದ ಮರಿ ನಾಗಪ್ಪ- ವಿಡಿಯೋ - ಹೆಲ್ಮೆಟ್ ಒಳಗೆ ಹಾವು
🎬 Watch Now: Feature Video
Published : Oct 5, 2023, 9:06 AM IST
ತ್ರಿಶೂರ್(ಕೇರಳ): ದ್ವಿಚಕ್ರ ಸವಾರರಿಗೆ ಹೆಲ್ಮೆಟ್ ಬಳಕೆ ಕಡ್ಡಾಯ ನಿಯಮ ಇರುವುದು ಅಪಘಾತ ಘಟನೆಗಳಿಂದ ತಮ್ಮ ಪ್ರಾಣ ಉಳಿಸಿಕೊಳ್ಳಲೆಂದು. ಆದರೆ, ಈ ಹೆಲ್ಮೆಟ್ನ್ನು ಅಜಾಗರೂಕತೆಯಿಂದ ಎಲ್ಲೆಂದರಲ್ಲಿ ಇರಿಸಿದಲ್ಲಿ ನಿಮ್ಮ ಜೀವಕ್ಕೆ ಕುತ್ತು ತರಬಹುದು. ಹೆಲ್ಮೆಟ್ ಧರಿಸುವ ಮೊದಲು ಒಮ್ಮೆ ಪರೀಕ್ಷಿಸುವುದು ಉತ್ತಮ. ಯಾಕೆಂದರೆ ಕೇರಳದ ತ್ರಿಶೂರ್ನಲ್ಲಿ ಹೆಲ್ಮೆಟ್ ಒಳಗೆ ಕಣ್ಣಿಗೆ ಕಾಣಿಸದ ಚಿಕ್ಕ ನಾಗರ ಹಾವೊಂದು ಅವಿತಿತ್ತು. ಹೌದು ಸವಾರರು ತಮ್ಮ ದ್ವಿಚಕ್ರ ವಾಹನಗಳನ್ನು ನಿಲುಗಡೆ ಮಾಡುವಾಗ ಬಹುತೇಕರು ತಮ್ಮ ಹೆಲ್ಮೆಟ್‌ಗಳನ್ನು ಪ್ಲಾಟ್‌ಫಾರ್ಮ್ ಅಥವಾ ಸ್ಕೂಟರ್‌ಗಳ ಫುಟ್ ರೆಸ್ಟ್‌ನಂತಹ ವಿವಿಧ ಸ್ಥಳಗಳಲ್ಲಿ ಅಜಾಗರೂಕತೆಯಿಂದ ಇಡುತ್ತಾರೆ.
ಇಂತಹ ಸಣ್ಣ ಅಜಾಗರೂಕತೆ ದೊಡ್ಡ ಅಪಾಯವನ್ನು ತರಬಹುದು. ತ್ರಿಶೂರ್ ಪುತ್ತೂರು ನಿವಾಸಿ ಪೊಂಟೆಕಲ್ ಸೋಜನ್ ಇಂತಹ ಅಪಾಯದಿಂದ ಪಾರಾಗಿದ್ದಾರೆ. ಬುಧವಾರ ಬೆಳಗ್ಗೆ ಸೋಜನ್ ಎಂಬುವವರ ಹೆಲ್ಮೆಟ್ ಒಳಗೆ ಮರಿ ನಾಗರಹಾವು ಪತ್ತೆಯಾಗಿತ್ತು. ಈತ ತನ್ನ ಕೆಲಸದ ಸ್ಥಳದಲ್ಲಿ ನಿಲ್ಲಿಸಿದ್ದ ಸ್ಕೂಟರ್‌ನ ಪ್ಲಾಟ್‌ಫಾರ್ಮ್ ಮೇಲೆ ಹೆಲ್ಮೆಟ್ ಇರಿಸಿದ್ದ. ಸಂಜೆ 4:00 ಗಂಟೆ ಸುಮಾರಿಗೆ ವಾಹನದಲ್ಲಿ ಹೊರಡಲು ಮುಂದಾದಾಗ ಹೆಲ್ಮೆಟ್ ಒಳಗೆ ಏನೋ ಚಲಿಸುತ್ತಿರುವುದು ಗಮನಕ್ಕೆ ಬಂದಿದೆ. ತಕ್ಷಣ ಹಾವಿನಂತೆ ಭಾಸವಾಗಿದೆ.
ಬಳಿಕ ಅರಣ್ಯ ಇಲಾಖೆಯ ನೆರವು ಕೋರಿದ್ದಾರೆ. ವಿಚಾರ ತಿಳಿದ ಬಳಿಕ ಕೇರಳ ಅರಣ್ಯ ಇಲಾಖೆಯ ಉರಗ ತಜ್ಞ ಲಿಜೋ ಎನ್ನುವವರು ಸ್ಥಳಕ್ಕೆ ಆಗಮಿಸಿದರು. ನಿಧಾನಕ್ಕೆ ಹೆಲ್ಮೆಟ್ ಪರಿಶೀಲಿಸಿದಾಗ ನಾಗರಹಾವು ಇರುವುದು ಪತ್ತೆಯಾಗಿದೆ. ಹೊರಗಿನಿಂದ ಗೋಚರವಾಗದಿದ್ದರೂ, ಹೆಲ್ಮೆಟ್‌ನೊಳಗೆ ಪರೀಕ್ಷಿಸಿದಾಗ 2 ತಿಂಗಳ ಅತ್ಯಂತ ವಿಷಕಾರಿ ನಾಗರಹಾವು ಕಂಡಿದೆ. ಬಳಿಕ ಹೇಗೋ ಹಾವನ್ನು ಹೆಲ್ಮೆಟ್ ಒಳಗೆಯಿಂದ ಹೊರತೆಗೆದು ಸುರಕ್ಷಿತವಾಗಿ ಬಿಡಲಾಗಿದೆ.
ಇದನ್ನೂ ಓದಿ: ತುಮಕೂರು: ದೇವರ ಕೊಠಡಿಯಲ್ಲಿ ಹೆಡೆ ಎತ್ತಿದ ನಾಗಪ್ಪ!