ಸಮುದ್ರದಲ್ಲಿ ಹೃದಯಾಘಾತಕ್ಕೀಡಾದ ವಿದೇಶಿ ನೌಕೆಯ ನಾವಿಕನ ರಕ್ಷಿಸಿದ ಭಾರತದ ಕೋಸ್ಟ್​ಗಾರ್ಡ್​: ವಿಡಿಯೋ - ವಿದೇಶಿ ನೌಕೆಯ ನಾವಿಕನ ರಕ್ಷಿಸಿದ ಭಾರತದ ಕೋಸ್ಟ್​ಗಾರ್ಡ್

🎬 Watch Now: Feature Video

thumbnail

By

Published : Jun 28, 2023, 12:30 PM IST

ಪೋರಬಂದರ್​(ಗುಜರಾತ್​): ಸಮುದ್ರ ಪ್ರಯಾಣದ ವೇಳೆ ಹೃದಯಾಘಾತಕ್ಕೀಡಾಗಿದ್ದ ವಿದೇಶಿ ಹಡಗಿನ ಕ್ಯಾಪ್ಟನ್​ ಒಬ್ಬರನ್ನು ಪೋರಬಂದರ್​ ಕೋಸ್ಟ್​ ಗಾರ್ಡ್​ ಪಡೆ ಕೆಟ್ಟ ಹವಾಮಾನದ ಮಧ್ಯೆಯೂ ರಕ್ಷಣಾ ಕಾರ್ಯಾಚರಣೆ ನಡೆಸಿದೆ. ಪೋರಬಂದರ್‌ನಿಂದ 90 ನಾಟಿಕಲ್ ಮೈಲು(166 ಕಿಮೀ) ದೂರದಲ್ಲಿದ್ದ ವಿದೇಶಿ ಹಡಗನ್ನು ವ್ಯತಿರಿಕ್ತ ಹವಾಮಾನ ಮಧ್ಯೆಯೂ ತಲುಪಿ ಅಲ್ಲಿಂದಲೇ ಟೇಕಾಫ್​ ಮಾಡಲಾಗಿದೆ.

ಮುದ್ರಾದಿಂದ ಮಾಲ್ಡೀವಿಯನ್​ ಗ್ಯಾಸ್​ ಹೊತ್ತೊಯ್ಯುತ್ತಿದ್ದ ವೇಳೆ ವಿದೇಶಿ ಹಡಗಿನ ಕ್ಯಾಪ್ಟನ್​ಗೆ ಹೃದಯಾಘಾತವಾಗಿದೆ. ಹಡಗಿನ ಸಿಬ್ಬಂದಿ ಭಾರತದ ಪೋರಬಂದರ್​ಗೆ ಮಾಹಿತಿ ನೀಡಿದೆ. ವಿಷಯ ತಿಳಿದ ತಕ್ಷಣ ಕೆಟ್ಟ ಹವಾಮಾನವನ್ನೂ ಲೆಕ್ಕಿಸದೇ 166 ಕಿಮೀ ದೂರದಲ್ಲಿ ಸಮುದ್ರದ ಮಧ್ಯೆ ಇದ್ದ ಹಡಗಿನಲ್ಲಿಗೇ ವಿಮಾನವನ್ನು ಹಾರಿಸಲಾಗಿದೆ.

ತೀವ್ರ ಗಾಳಿ ಮತ್ತು ಸಮುದ್ರದ ಉಬ್ಬರದ ನಡುವೆಯೇ ಕ್ಯಾಪ್ಟನ್​ರನ್ನು ಏರ್​ಲಿಫ್ಟ್​ ಮಾಡಿ, ಪೋರಬಂದರಿನ ಆಸ್ಪತ್ರೆಗೆ ದಾಖಲಿಸಲಾಯಿತು. ಪರಿಸ್ಥಿತಿ ಗಂಭೀರವಾಗಿದ್ದ ಕಾರಣ ಅವರನ್ನು ಅಲ್ಲಿಂದ ರಾಜ್​ಕೋಟ್​ಗೆ ಸಾಗಿಸಲಾಗಿದೆ. ಚಿಕಿತ್ಸೆ ನೀಡಲಾಗುತ್ತಿದ್ದು, ಕ್ಯಾಪ್ಟನ್​ ಸ್ಪಂದಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಕರೋಲ್​ ಬಾಗ್​ ಮಾರುಕಟ್ಟೆಗೆ ರಾಹುಲ್​ ಗಾಂಧಿ ದಿಢೀರ್ ಭೇಟಿ.. ಬೈಕ್​ ರಿಪೇರಿ ​​​​​​ಮಾಡಿ ಗಮನ ಸೆಳೆದ ಕಾಂಗ್ರೆಸ್​ ನೇತಾರ!

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.