ಬೇಕಾ ಫೋನ್ ನಂಬರ್? ಕಿರುಕುಳ ನೀಡಿದ ಹುಡುಗನಿಗೆ ಬಿತ್ತು ಧರ್ಮದೇಟು- ವಿಡಿಯೋ - ಮೊಹಲ್ಲಾ ಸಿಂಧಿ ಕಾಲೋನಿ
🎬 Watch Now: Feature Video
ಫರೂಕಾಬಾದ್ (ಉತ್ತರ ಪ್ರದೇಶ) : ಕೋಚಿಂಗ್ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ವಿದ್ಯಾರ್ಥಿನಿಯರನ್ನು ಅಡ್ಡಗಟ್ಟಿ ಮೊಬೈಲ್ ನಂಬರ್ ಕೇಳಿದ ಹುಡುಗನಿಗೆ ವಿದ್ಯಾರ್ಥಿನಿಯರು ಥಳಿಸಿದ ಘಟನೆ ಫರೂಕಾಬಾದ್ನಲ್ಲಿ ನಡೆದಿದೆ. ಕೊತ್ವಾಲಿ ಪ್ರದೇಶದ ರೈಲ್ವೆ ರಸ್ತೆಯ ಮೊಹಲ್ಲಾ ಸಿಂಧಿ ಕಾಲೋನಿಯಲ್ಲಿ ಹುಡುಗನೊಬ್ಬ ವಿದ್ಯಾರ್ಥಿನಿಯರನ್ನು ಹಿಂಬಾಲಿಸಿ, ಅಡ್ಡಗಟ್ಟಿ ಮೊಬೈಲ್ ನಂಬರ್ ಕೇಳಿದ್ದಾನೆ. ಇದರಿಂದ ಕೋಪಗೊಂಡ ಇಬ್ಬರು ವಿದ್ಯಾರ್ಥಿನಿಯರು ಆತನನ್ನು ಹಿಡಿದು ಧರ್ಮದೇಟು ನೀಡಿದ್ದಾರೆ. ಘಟನೆಯ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಇದನ್ನೂ ಓದಿ : ತೋಟದ ಮನೆಗೆ ನುಗ್ಗಿದ್ದ ಚಿರತೆಯನ್ನು ಕೂಡಿಹಾಕಿದ ಗ್ರಾಮಸ್ಥರು
Last Updated : Feb 14, 2023, 11:34 AM IST