ಮಾಜಿ ಸಚಿವ ಈಶ್ವರಪ್ಪ ಮೊಮ್ಮಗನ ಮದುವೆ.. ನವ ಜೋಡಿಗೆ ಆಶೀರ್ವದಿಸಿದ ಸಿಎಂ ಬೊಮ್ಮಾಯಿ - fomer minsiter ishwarappa grand sons marriag
🎬 Watch Now: Feature Video
ಶಿವಮೊಗ್ಗ: ಮಾಜಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಮೊಮ್ಮಗನ ಮದುವೆ ಸಮಾರಂಭ ನಗರದ ಶುಭಶ್ರೀ ಕಲ್ಯಾಣ ಮಂದಿರದಲ್ಲಿ ಅದ್ಧೂರಿಯಾಗಿ ನಡೆಯಿತು. ಈ ವಿವಾಹ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲ್ಗೊಂಡು ನವ ಜೋಡಿಗೆ ಆಶೀರ್ವದಿಸಿದರು. ಮುಖ್ಯಮಂತ್ರಿಗಳೊಂದಿಗೆ ಸಚಿವರಾದ ಡಾ. ಅಶ್ವತ್ಥನಾರಾಯಣ, ಭೈರತಿ ಬಸವರಾಜ್, ಗೃಹ ಸಚಿವ ಆರಗ ಜ್ಞಾನೇಂದ್ರ, ಶಾಸಕ ಹರತಾಳು ಹಾಲಪ್ಪ, ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಎಸ್ಪಿ ಲಕ್ಷ್ಮಿ ಪ್ರಸಾದ್, ಸಿಇಒ ವೈಶಾಲಿ ಮತ್ತಿತರರು ಮದುವೆಯಲ್ಲಿ ಭಾಗವಹಿಸಿದ್ದರು.
Last Updated : Feb 3, 2023, 8:22 PM IST