ಸಮೀಕ್ಷೆಗಳು ಉಲ್ಟಾ ಆಗಲಿದೆ, ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ: ಬೊಮ್ಮಾಯಿ - ಮತದಾನೋತ್ತರ ಸಮೀಕ್ಷೆಗಳು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/640-480-18474518-thumbnail-16x9-lek.jpg)
ಹುಬ್ಬಳ್ಳಿ: ಶಿಗ್ಗಾವಿ ಜನತೆ ತೋರಿದ ಪ್ರೀತಿಗೆ ನಾನು ಚಿರರುಣಿ. ಚುನಾವಣೆಯನ್ನು ಹಬ್ಬದ ರೀತಿಯಲ್ಲಿ ಆಚರಣೆ ಮಾಡಿದರು. ಮತದಾನೋತ್ತರ ಸಮೀಕ್ಷೆಗಳು ಕಳೆದ ಬಾರಿ ಕಾಂಗ್ರೆಸ್ 107ಕ್ಕೂ ಅಧಿಕ ಸ್ಥಾನ ಗೆಲ್ಲಲಿದೆ ಅಂತ ಹೇಳಿದ್ದವು. ಆದರೆ, ಫಲಿತಾಂಶದ ದಿನ ಅದು ಉಲ್ಟಾ ಆಯಿತು. ಈಗಲೂ ಅದೇ ನಂಬಿಕೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ತಮ್ಮ ನಿವಾಸದ ಬಳಿ ಇಂದು ಮಾತನಾಡಿದ ಅವರು, "ನನ್ನ ವಿರುದ್ಧ ಷಡ್ಯಂತ್ರ, ಅಪಪ್ರಚಾರ ಮಾಡಿದರು. ಆದರೆ, ಅದೆಲ್ಲ ನಿನ್ನೆಗೆ ಮುಗಿದಿದೆ. ನಾನು ಬಹುಮತದಿಂದ ಗೆಲ್ಲುತ್ತೇನೆ. ಪ್ರಧಾನಿ ನರೇಂದ್ರ ಮೋದಿಯವರ ಪ್ರಚಾರ ನಮಗೆ ಪ್ಲಸ್ ಆಗಿದೆ. ಯುವಕರು ಮತ್ತು ಮಹಿಳೆಯರು ನಮ್ಮ ಪರವಾಗಿ ಮತದಾನ ಮಾಡಿದ್ದಾರೆ. ನಾವು ಸಂಪೂರ್ಣ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರುತ್ತೇವೆ" ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಒಂದು ವೇಳೆ ಅತಂತ್ರ ಫಲಿತಾಂಶ ಬಂದರೆ ಏನು? ಎಂಬ ಪ್ರಶ್ನೆಗೆ, "ಈ ಕುರಿತು ಉತ್ತರ ನೀಡಲ್ಲ. ನಾನು 150 ಸ್ಥಾನ ಗೆಲ್ಲುತ್ತೇವೆ ಅಂತಲೂ ಹೇಳಿಲ್ಲ. ಆದರೆ, ಬಹುಮತ ಅಂತ ಹೇಳಿದ್ದೆ. ಈಗಲೂ ಅದೇ ಹೇಳಿಕೆಗೆ ಬದ್ಧ" ಎಂದರು.
ಇದನ್ನೂ ಓದಿ : ಜೆಡಿಎಸ್‌ನೊಂದಿಗೆ ಮೈತ್ರಿ ಪ್ರಶ್ನೆಯೇ ಇಲ್ಲ, ನಾವು 146 ಸ್ಥಾನ ಗೆಲ್ಲುತ್ತೇವೆ: ಡಿ.ಕೆ.ಶಿವಕುಮಾರ್