ಚಂದ್ರಯಾನ-3: ಭಾರತ ನೇತೃತ್ವದಲ್ಲಿ ಹೊಸ ಯುಗದ ಆರಂಭ: ನಾಸಾದ ಮಾಜಿ ಅಧಿಕಾರಿ ಅಭಿನಂದನೆ... ಶುಭಕೋರಿದ ವಿಶ್ವಸಂಸ್ಥೆ - ಮಾಜಿ ಸಾನಾ ಅಧಿಕಾರಿ ಮೆಚ್ಚುಗೆ
🎬 Watch Now: Feature Video
Published : Aug 24, 2023, 9:02 AM IST
|Updated : Aug 24, 2023, 1:21 PM IST
ವಾಷಿಂಗ್ಟನ್ ಡಿಸಿ (ಅಮೆರಿಕ): ಚಂದ್ರಯಾನ-3ರ ಯಶಸ್ಸು ಭಾರತೀಯ ಆವಿಷ್ಕಾರ, ಮಾನವನನ್ನು ಅಂತರಿಕ್ಷಕ್ಕೆ ಕೊಂಡೊಯ್ಯುವ ಸಾಮರ್ಥ್ಯಗಳ ವಿಜಯವಾಗಿದೆ ಎಂದು ರೆಡ್‌ವೈರ್ ಸ್ಪೇಸ್‌ನ ಮುಖ್ಯ ಬೆಳವಣಿಗೆ ಅಧಿಕಾರಿ, ನಾಸಾದ ಮಾಜಿ ಅಧಿಕಾರಿ ಮೈಕ್ ಗೋಲ್ಡ್ ಬಣ್ಣಿಸಿದ್ದಾರೆ. ಇದು ಭಾರತಕ್ಕೆ ಹೆಚ್ಚು ಬಂಡವಾಳ ಆಕರ್ಷಿಸಲು ನೆರವಾಗಲಿದೆ ಎಂದೂ ಅವರು ವಿಶ್ಲೇಷಿಸಿದ್ದಾರೆ.
''ಇಸ್ರೋ ಮತ್ತು ಭಾರತದ ಎಲ್ಲ ಜನರಿಗೆ ಅಭಿನಂದನೆಗಳು. ಇದು ಭಾರತಕ್ಕೆ ಮಾತ್ರವಲ್ಲದೇ ಇಡೀ ಜಗತ್ತಿಗೆ ನಾವು ಚಂದ್ರನ ಅಭಿವೃದ್ಧಿಯ ಈ ಹೊಸ ಯುಗಕ್ಕೆ ಸಾಗುತ್ತಿರುವ ವೇಳೆಯಲ್ಲಿ, ಭಾರತವು ಮುನ್ನಡೆ ಸಾಧಿಸುತ್ತಿರುವ ವಿಜಯವಾಗಿದೆ. ಚಂದ್ರಯಾನ-3ರ ಯಶಸ್ಸನ್ನು ಸಾಧಿಸಿರುವುದು ಅದ್ಭುತವಾಗಿದೆ. ಇದು ಭಾರತ ನೇತೃತ್ವದ ಹೊಸ ಯುಗದ ಆರಂಭವಾಗಿದೆ'' ಎಂದು ಮೈಕ್ ಗೋಲ್ಡ್, ಅವರು ಚಂದ್ರಯಾನ-3ರ ಲ್ಯಾಂಡರ್ ಚಂದ್ರನ ಮೇಲೆ ಯಶಸ್ವಿಯಾಗಿ ಲ್ಯಾಂಡಿಂಗ್ ಆಗಿರುವ ಹಿನ್ನೆಲೆ ಶುಭಕೋರಿದ್ದಾರೆ.
ವಿಶ್ವಸಂಸ್ಥೆಯಿಂದ ಭಾರತಕ್ಕೆ ಅಭಿನಂದನೆ: ಚಂದ್ರನ ಮೇಲೆ ಚಂದ್ರಯಾನ-3ರ ಯಶಸ್ವಿ ಲ್ಯಾಂಡಿಂಗ್ ಆಗಿರುವುದಕ್ಕೆ ''ವಿಶ್ವಸಂಸ್ಥೆಯ ಅಧ್ಯಕ್ಷರು ಭಾರತವನ್ನು ಅಭಿನಂದಿಸಿದ್ದಾರೆ'' ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷರ ವಕ್ತಾರರಾದ ಪೌಲಿನಾ ಕುಬಿಯಾಕ್ ಸಂತಸ ವ್ಯಕ್ತಪಡಿಸಿದರು.
ಪ್ರಜ್ಞಾನ್ ರೋವರ್ ಅನ್ನು ತನ್ನೊಂದಿಗೆ ಹೊತ್ತುಕೊಂಡು ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸುತ್ತಿದ್ದಂತೆ, ಇದು ಭಾರತದ ಬಾಹ್ಯಾಕಾಶ ಪ್ರಯಾಣದಲ್ಲಿ ದೈತ್ಯ ಜಿಗಿತವನ್ನು ಗುರುತಿಸಿ ಇಸ್ರೋದ ಸುದೀರ್ಘ ವರ್ಷಗಳ ಶ್ರಮಕ್ಕೆ ಅರ್ಹವಾದ ಅಂತಿಮ ಫಲಿತಾಂಶವನ್ನು ನೀಡುತ್ತದೆ.
ಇದನ್ನೂ ಓದಿ: 'ಭಲೇ ಭಾರತ': ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಇಳಿಸಿದ ಇಸ್ರೋಗೆ ವಿಶ್ವದ ಮೆಚ್ಚುಗೆ