ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ: ನೃತ್ಯ ಮಾಡಿ ಪ್ರೇಕ್ಷಕರನ್ನು ರಂಜಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ - ಈಟಿವಿ ಭಾರತ ಕನ್ನಡ
🎬 Watch Now: Feature Video
ಹುಬ್ಬಳ್ಳಿ : ನಗರದ ಜೆ.ಕೆ. ಸ್ಕೂಲ್ ವೆಂಕಟರಮಣ ದೇವಸ್ಥಾನದ ಬಳಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಸಖತ್ ಸ್ಟೆಪ್ ಹಾಕಿದರು. ಹುಬ್ಬಳ್ಳಿ ಹುಡುಗಿ ಅನನ್ಯ ಪಾಟೀಲ್ ಹಾಡಿದ ಗಜಪತಿ ಗರ್ವಭಂಗ ಚಿತ್ರದ ಜಟಕಾ ಕುದುರೆ ಹತ್ತಿ ಜಾತ್ರೆಗೆ ಹೋಗುಮಾ ಹಾಡಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೃತ್ಯ ಮಾಡಿದರು.
ಸಚಿವರು ಹೆಜ್ಜೆ ಹಾಕುತ್ತಿದ್ದಂತೆ ಅವರ ಜೊತೆಯಲ್ಲಿದ್ದವರು ಸಾಥ್ ನೀಡಿ ನೆರೆದಿದ್ದ ಪ್ರೇಕ್ಷಕರರನ್ನು ರಂಜಿಸಿದರು. ಇನ್ನೂ ವೇದಿಕೆಯಲ್ಲಿ ಸಚಿವರು ನಟ ಪುನೀತ್ ರಾಜಕುಮಾರ್ ಅವರ ರಾಜಕುಮಾರ ಸಿನಿಮಾದ "ಬೊಂಬೆ ಹೇಳುತೈತೆ" ಹಾಡನ್ನು ಹಾಡಿದರು.
ಇದನ್ನೂ ನೋಡಿ : ಬಳ್ಳಾರಿ ಉತ್ಸವ : ಸಖತ್ ಸ್ಟೆಪ್ ಹಾಕಿದ ಶ್ರೀರಾಮುಲು, ಸೋಮಶೇಖರ್ ರೆಡ್ಡಿ