ಸಿದ್ದರಾಮಯ್ಯಗೆ ಸಿಎಂ ಸ್ಥಾನ ಖಚಿತ, ಬಳ್ಳಾರಿಯಲ್ಲಿ 101 ತೆಂಗಿನ ಕಾಯಿ ಒಡೆದು ಸಂಭ್ರಮಾಚರಣೆ - karnataka next cm siddaramaih

🎬 Watch Now: Feature Video

thumbnail

By

Published : May 17, 2023, 3:47 PM IST

ಬಳ್ಳಾರಿ: ರಾಜ್ಯದ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಬಹುತೇಕ ಖಚಿತ ಎಂದು ತಿಳಿಯುತ್ತಿದಂತೆ ಬಳ್ಳಾರಿ ನಗರದಲ್ಲಿ ಹಾಲುಮತ ಮಹಾಸಭಾ ಜಿಲ್ಲಾ ಘಟಕದ ಕಾರ್ಯಕರ್ತರು ಹಾಗೂ ಸದಸ್ಯರು ಕನಕ ದುರ್ಗಮ್ಮ ದೇವಸ್ಥಾನದ ಮುಂದೆ 101 ತೆಂಗಿನ ಕಾಯಿ ಒಡೆದು ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು. ಬಳಿಕ ಸಿದ್ದರಾಮಯ್ಯ ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ ಪಟಾಕಿ ಸಿಡಿಸಿ ಜಯಘೋಷಗಳನ್ನು ಕೂಗಿ ಹರ್ಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಹಾಲುಮತ ಮಹಾಸಭಾ ಬಳ್ಳಾರಿ ಜಿಲ್ಲಾ ಘಟಕದ ಮುಖಂಡರಾದ ಈರನಗೌಡ, ಹೊನ್ನೂರು ಸ್ವಾಮಿ, ಸೂರ್ಯದೇವ ಶಿವಪ್ಪ, ಶಿವಕುಮಾರ್, ಕೇಶವ, ವಿರುಪಾಕ್ಷ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

ಸಿದ್ದರಾಮಯ್ಯಗೆ ಸಿಎಂ ಸ್ಥಾನ ನೀಡಬೇಕು ಎಂದು ಈಡುಗಾಯಿ ಒಡೆದು ಪ್ರಾರ್ಥನೆ: ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಕರ್ನಾಟಕ‌ ಪ್ರದೇಶ ಯುವ ಕುರುಬ ಘಟಕದ ವತಿಯಿಂದ ಈಡುಗಾಯಿ ಒಡೆಯುವ ಮೂಲಕ ಬೇಡಿಕೆಯನ್ನು ಸಲ್ಲಿಸಲಾಯಿತು. ಶಿವಮೊಗ್ಗದ ರಾಮಣ್ಣ ಶ್ರೇಷ್ಠಿ ಪಾರ್ಕ್​ನ ಗಣಪತಿ ದೇವಾಲಯದ ಮುಂದೆ ಯುವ ಕುರುಬ ಘಟದ ಪದಾಧಿಕಾರಿಗಳು 101 ಈಡುಗಾಯಿ ಒಡೆಯುವ ಮೂಲಕ ಪ್ರಾರ್ಥಿಸಿದರು.

ಇದನ್ನೂ ಓದಿ: ಸಿಎಂ ಪದಗ್ರಹಣಕ್ಕಾಗಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಸಿದ್ಧತೆ ಶುರು: ವಿಡಿಯೋ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.