ಅತಿವೇಗದ ಚಾಲನೆ, ಮಂಗಳೂರಿನಲ್ಲಿ ಹೊಂಡಕ್ಕೆ ಹಾರಿದ ಕಾರು- ವಿಡಿಯೋ - ಅತೀ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆ

🎬 Watch Now: Feature Video

thumbnail

By ETV Bharat Karnataka Team

Published : Oct 19, 2023, 10:31 PM IST

ಮಂಗಳೂರು: ಅತಿ ವೇಗದಿಂದ ಬಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬಿಟ್ಟು ಹೊಂಡಕ್ಕೆ ಹಾರಿದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಂಗಳೂರು ನಗರದ ಹೊರವಲಯದ ಗುರುಪುರದ ಬಳಿ ಘಟನೆ ನಡೆದಿದೆ. 

ಬಂಟ್ವಾಳ - ಕೈಕಂಬ ಜೋಡುಮಾರ್ಗ ನಿವಾಸಿ ಪಿ‌.ಎಸ್.ಮೊಹಮ್ಮದ್ ಎಂಬವರು ಅತಿ ವೇಗದಿಂದ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದರು. ಗುರುಪುರ ತಲುಪುತ್ತಿದ್ದಂತೆ ಕಾರು ರಸ್ತೆ ತೊರೆದು ಹೊಂಡಕ್ಕೆ ಬಿದ್ದಿದೆ. ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ‌.

ಎದೆ ಝಲ್ಲೆನಿಸುವ 8 ಸೆಕೆಂಡ್‌ನ ವಿಡಿಯೋ ಲಭ್ಯವಾಗಿದೆ. ಈ ಘಟನೆ ಅಕ್ಟೋಬರ್ 15 ರಂದು ನಡೆದಿದೆ ಎಂದು ತಿಳಿದು ಬಂದಿದ್ದು, ಇಂದು ವೈರಲ್ ಆಗಿದೆ. ಬಜ್ಪೆ ಠಾಣಾ ಪೊಲೀಸರು ಅತಿ ವೇಗ ಮತ್ತು ನಿರ್ಲಕ್ಷ್ಯದ ಚಾಲನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಾಹನ ಚಾಲಕನಿಗೆ 3 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ದೊರೆತಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಲಾರಿ - ಕಾರಿನ ಮಧ್ಯೆ ಭೀಕರ ಅಪಘಾತ: ತಾಯಿ - ಮಗು ಸಜೀವ ದಹನ, ತಂದೆ - ಮತ್ತೋರ್ವ ಮಗುವಿಗೆ ಗಂಭೀರ ಗಾಯ

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.