ತಮಿಳುನಾಡಿನ ದಿಂಬಂನಲ್ಲಿ ಕಾರು ಪಲ್ಟಿ, ಮೈಸೂರಿನ 7 ಮಂದಿಗೆ ಗಂಭೀರ ಗಾಯ - kannada top news
🎬 Watch Now: Feature Video
ಮೈಸೂರು/ದಿಂಬಂ: ತಮಿಳುನಾಡಿನ ದಿಂಬಂ ಘಾಟಿನಲ್ಲಿ ಭಾನುವಾರ ಕಾರು ಪಲ್ಟಿಯಾಗಿ ಮೈಸೂರಿನ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕೊಯಮತ್ತೂರಿನ ಗಂಗಾ ಅಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಮೈಸೂರಿನ ಹೂಟಗಳ್ಳಿ ನಿವಾಸಿಗಳಾದ ಅಲೆಕ್ಸ್ (35), ಮೇರಿ ವಿಕ್ಟೋರಿಯಾ (32), ಜೋಥಮ್(8), ಸಗಾಯ್ ಮಣಿರಾಜು (65), ಮೇರಿ ಸಿಸಿಲಿಯಾ(55), ಮೇರಿ ಅಲ್ಫಾನ್ಸೋ(48), ಮೇರಿ ಆಗ್ನಸ್ (58) ಗಂಭೀರವಾಗಿ ಗಾಯಗೊಂಡವರು.
ಮೈಸೂರಿನಿಂದ ಈರೋಡ್ಗೆ ತೆರಳುತ್ತಿದ್ದ ವೇಳೆ ದಿಂಬಂ ಘಾಟಿನ ನಾಲ್ಕನೇ ತಿರುವಿನಲ್ಲಿ ಚಾಲಕ ಅಲೆಕ್ಸ್ ನಿಯಂತ್ರಣ ತಪ್ಪಿ ಕಾರು ಪಲ್ಟಿ ಹೊಡೆದಿದೆ. ಕಾರು ಪಲ್ಟಿಯಾದ ರಭಸಕ್ಕೆ ಅಲೆಕ್ಸ್ ಪತ್ನಿ ಮೇರಿ ವಿಕ್ಟೋರಿಯಾ ಅವರಿಗೆ ಮುಖ ಭಾಗಕ್ಕೆ ತೀವ್ರ ಪೆಟ್ಟಾಗಿದೆಯಲ್ಲದೆ, ಎರಡೂ ಕೈಗಳು ಮುರಿದಿವೆ. ಮಗ ಜೋಥಮ್ಗೆ ತಲೆ ಹಾಗೂ ಎದೆಯ ಭಾಗಕ್ಕೆ ಪೆಟ್ಟಾಗಿದೆ. ಕಾರಿನಲ್ಲಿದ್ದ ಎಲ್ಲರಿಗೂ ಕೈಕಾಲುಗಳು ಮುರಿದಿವೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಸೋಲಾರ್ ಬೇಲಿ ಮುರಿದು ತೋಟಕ್ಕೆ ನುಗ್ಗಿದ ಆನೆ: ಸಿಸಿಟಿವಿ ದೃಶ್ಯ