9th International Yoga Day: ಐಟಿಬಿಪಿ ಸಿಬ್ಬಂದಿಯೊಂದಿಗೆ ಶ್ವಾನದ ಯೋಗ ಪ್ರದರ್ಶನ; ವಿಡಿಯೋ ವೈರಲ್​ - 9ನೇ ಅಂತಾರಾಷ್ಟ್ರೀಯ ಯೋಗ ದಿನ

🎬 Watch Now: Feature Video

thumbnail

By

Published : Jun 21, 2023, 3:06 PM IST

ಉಧಾಮ್​ಪುರ (ಜಮ್ಮು ಕಾಶ್ಮೀರ): ಇಂದು 9ನೇ ಅಂತಾರಾಷ್ಟ್ರೀಯ ಯೋಗ ದಿನ. ಭಾರತ ಸೇರಿದಂತೆ ಪ್ರಪಂಚದಾದ್ಯಂತ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. 'ವಸುಧೈವ ಕುಟುಂಬಕಂ' ಈ ವರ್ಷದ ಥೀಮ್ ಆಗಿದ್ದು, ಆಸನಗಳನ್ನು ಮಾಡುವ ಮೂಲಕ ಯೋಗ ದಿನ ಆಚರಿಸುತ್ತಿದ್ದಾರೆ. ಕೆಲವರು ಜಲಯೋಗದಲ್ಲಿ ತೊಡಗಿದ್ದರೆ, ಇನ್ನೂ ಕೆಲವರು ಶಿಖರವೇರಿ ಯೋಗಾಭ್ಯಾಸ ಮಾಡುತ್ತಿದ್ದಾರೆ. 

ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್​ (ಐಟಿಬಿಪಿ)ನ ಶ್ವಾನಗಳು ಕೂಡ ಯೋಗ ಪ್ರದರ್ಶನ ಮಾಡಿ ಗಮನ ಸೆಳೆದವು. ಜಮ್ಮು ಮತ್ತು ಕಾಶ್ಮೀರದ ಉಧಾಮ್‌ಪುರದ ಪ್ರನು ಕ್ಯಾಂಪ್‌ನಲ್ಲಿ ಐಟಿಬಿಪಿ ಸಿಬ್ಬಂದಿಯೊಂದಿಗೆ ಡಾಗ್​ ಸ್ಕ್ವಾಡ್​ ಕೂಡ ಯೋಗ ಸೆಷನ್‌ನಲ್ಲಿ ಭಾಗವಹಿಸಿತು. ಈ ಹೃದಯಸ್ಪರ್ಶಿ ವಿಡಿಯೋ ಜಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು ನೆಟಿಜನ್​​ಗಳ ಗಮನ ಸೆಳೆದಿದೆ. 

ಸಿಬ್ಬಂದಿಯೊಂದಿಗೆ ವಿವಿಧ ಆಸನಗಳನ್ನು ಶ್ವಾನಗಳು ಹಾಕುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಡಿಯೊವನ್ನು ಕೆಲವೇ ನಿಮಿಷಗಳ ಹಿಂದೆ ಹಂಚಿಕೊಳ್ಳಲಾಗಿದ್ದು, ಪೋಸ್ಟ್ ಮಾಡಿದ ಒಂದು ಗಂಟೆಯಲ್ಲೇ ಸಾವಿರಾರು ಜನರಿಂದ ವೀಕ್ಷಿಸಲ್ಪಟ್ಟಿದೆ. ಅದೇ ರೀತಿ ಲೈಕ್‌ಗಳು ಮತ್ತು ಕಾಮೆಂಟ್‌ಗಳು ಬಂದಿವೆ.

ಇದನ್ನೂ ಓದಿ: ಈ ಬಾಲಕ ಜ್ಯೂನಿಯರ್​​​ ರಾಮದೇವ ಬಾಬಾ.. ವಯಸ್ಸು ಕೇವಲ 10.. 150ಕ್ಕೂ ಹೆಚ್ಚು ಆಸನಗಳು ಈತನಿಗೆ ಸುಲಲಿತ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.