ಮಂಗಳೂರಿನಲ್ಲಿ 60 ಬಸ್ಗಳ ಒಡೆಯ ಆತ್ಮಹತ್ಯೆ.. ಸಾಲು ಸಾಲು ಬಸ್ಗಳೊಂದಿಗೆ ಮಾಲೀಕನ ಅಂತಿಮಯಾತ್ರೆ - ಈಟಿವಿ ಭಾರತ್ ಕನ್ನಡ ಸುದ್ದಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/02-10-2023/640-480-19663612-thumbnail-16x9-sanjuuu.jpg)
![ETV Bharat Karnataka Team](https://etvbharatimages.akamaized.net/etvbharat/prod-images/authors/karnataka-1716535795.jpeg)
Published : Oct 2, 2023, 8:31 PM IST
ಮಂಗಳೂರು : ನಗರದ ಮಹೇಶ್ ಮೋಟಾರ್ಸ್ ಬಸ್ ಮಾಲೀಕ ಪ್ರಕಾಶ್ ಶೇಖ ಅವರ ಸಾವಿನ ಹಿನ್ನೆಲೆಯಲ್ಲಿ ಇಂದು ಅವರ ಒಡೆತನದ ಮಹೇಶ್ ಬಸ್ಗಳು ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿರುವ ವಿಡಿಯೋ ವೈರಲ್ ಆಗಿದೆ.
ಈ ಬಸ್ಗಳ ಮೆರವಣಿಗೆ ಇದು ಕಂಬನಿ ಮಿಡಿವ ಅಂತಿಮಯಾತ್ರೆಯಾಗಿತ್ತು. ನಗರದ ಖ್ಯಾತ ಮಹೇಶ್ ಬಸ್ ಮಾಲೀಕ ಪ್ರಕಾಶ್ ಶೇಖ ಅವರು ನಿನ್ನೆ ಕದ್ರಿ ಕಂಬಳದಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. 60 ಬಸ್ಗಳಿರುವ ಅವರು ಏಕಾಏಕಿ ಆತ್ಮಹತ್ಯೆಗೆ ಶರಣಾಗಿದ್ದರು.
ಪ್ರಕಾಶ್ ಶೇಖ ಅವರ ಮೃತದೇಹ ಮಹಜರು ಕಾರ್ಯ ನಗರದ ಎ. ಜೆ ಆಸ್ಪತ್ರೆಯಲ್ಲಿ ನಡೆದಿತ್ತು. ಸೋಮವಾರ ಬೆಳಗ್ಗೆ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಬಳಿಕ ಅವರದ್ದೇ ಮಹೇಶ್ ಬಸ್ಗಳ ಮೆರವಣಿಗೆಯೊಂದಿಗೆ ಅವರ ಪಾರ್ಥಿವ ಶರೀರದ ಅಂತಿಮಯಾತ್ರೆ ನಡೆಯಿತು.
ಹೀಗೆ ಸಾಲು ಸಾಲು ಬಸ್ಗಳು ರಸ್ತೆಯಲ್ಲಿ ಸಾಗುತ್ತಿದ್ದರೆ, ಎಲ್ಲರ ಎದೆ ಭಾರವಾಗಿತ್ತು. ಇಷ್ಟು ಸಮಯ ಜೊತೆಗಿದ್ದು, ಅನ್ನ ಹಾಕಿದ ಮಾಲೀಕ ಇನ್ನಿಲ್ಲ ಎಂಬ ನೋವು ಎಲ್ಲ ಬಸ್ ಸಿಬ್ಬಂದಿಯಲ್ಲಿ ತುಂಬಿತ್ತು. ಪ್ರಕಾಶ್ ಶೇಖ ಅವರು ದಕ್ಷಿಣ ಕನ್ನಡ ಬಸ್ ಮಾಲೀಕರ ಸಂಘದ ಸದಸ್ಯರು, ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿಯೂ ಆಗಿದ್ದರು. ಎಲ್ಲಾ ಬಸ್ ಮಾಲೀಕರಿಗೂ ಇವರು ಸ್ಫೂರ್ತಿಯ ಚಿಲುಮೆಯಾಗಿದ್ದರು. ಇವರ ತಂದೆಯವರಾದ ಜಯರಾಮ್ ಶೇಖ ಅವರು ಬಸ್ ಮಾಲೀಕರ ಸಂಘದ ಹಿರಿಯರು ಹಾಗೂ ಸಂಘದ ಮಾಜಿ ಅಧ್ಯಕ್ಷರಾಗಿದ್ದರು.
ಇದನ್ನೂ ಓದಿ: ಮಂಗಳೂರಿನಲ್ಲಿ ಬಸ್ ಉದ್ಯಮಿ ಆತ್ಮಹತ್ಯೆ