ರಸ್ತೆಯಿಂದ ಕಂದಕಕ್ಕೆ ಜಾರಿ ಅರ್ಧಕ್ಕೆ ನಿಂತ ಬಸ್, ಕೂದಲೆಳೆ ಅಂತರದಲ್ಲಿ ಯಾತ್ರಿಕರು ಪಾರು: ವಿಡಿಯೋ - ಬಸ್ ರಸ್ತೆಯಿಂದ ಕಂದಕಕ್ಕೆ ಜಾರಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/640-480-18401571-thumbnail-16x9-ran1.jpg)
ಉತ್ತರಕಾಶಿ (ಉತ್ತರಾಖಂಡ): ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ದೊಡ್ಡ ದುರಂತವೊಂದು ತಪ್ಪಿದೆ. ಯಾತ್ರಿಕರ ಬಸ್ವೊಂದು ಕಂದಕಕ್ಕೆ ಬೀಳುವುದರಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದೆ. 28 ಪ್ರಯಾಣಿಕರಿಂದ ತುಂಬಿದ್ದ ಬಸ್ ರಸ್ತೆಯಿಂದ ಕಂದಕಕ್ಕೆ ಜಾರಿ ಅರ್ಧಕ್ಕೆ ನಿಂತು ನೇತಾಡಿದೆ. ಇದರಿಂದ ಎಲ್ಲ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಾಜಸ್ಥಾನದಿಂದ ಯಮುನೋತ್ರಿಗೆ ಯಾತ್ರಿಕರನ್ನು ತುಂಬಿಕೊಂಡು ಬಸ್ ಬರುತ್ತಿತ್ತು. ಈ ವೇಳೆ ದಾಬರ್‌ಕೋಟ್ ಮತ್ತು ಸಯನಚಟ್ಟಿ ಮಾರ್ಗದಲ್ಲಿ ಸಂಚರಿಸುತ್ತಿದ್ದಾಗ ಬಸ್ ಮೊದಲು ದೊಡ್ಡ ಕಲ್ಲಿಗೆ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗುತ್ತಿದೆ. ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ಕಂದಕದತ್ತ ಬಸ್ ಜಾರಿದೆ. ಆದರೆ, ಪವಾಡವೆಂಬಂತೆ ಬಸ್ ರಸ್ತೆಯ ಮೇಲ್ಭಾಗದಲ್ಲಿ ನಿಂತುಕೊಂಡಿದೆ. ಇಲ್ಲವಾದಲ್ಲಿ ಭಾರಿ ದುರಂತ ಸಂಭವಿಸುತ್ತಿತ್ತು ಎಂದು ತಿಳಿದು ಬಂದಿದೆ.
ಬಸ್ ಕಂದಕಕ್ಕೆ ಜಾರಿ ನೇತಾಡುತ್ತಿದ್ದಂತೆಯೇ ಎಲ್ಲ ಪ್ರಯಾಣಿಕರು ಭಯದಲ್ಲಿ ಕೂಗಿದ್ದಾರೆ. ಎಲ್ಲರೂ ಸುರಕ್ಷಿತವಾಗಿ ಬಸ್ನಿಂದ ಇಳಿದಿದ್ದಾರೆ. ಇದಾದ ಬಳಿಕ ಜೆಸಿಬಿ ಸಹಾಯದಿಂದ ಹಗ್ಗ ಕಟ್ಟಿ ಬಸ್ಅನ್ನು ರಸ್ತೆಗೆ ಎಳೆಯಲಾಗಿದೆ. ಬಸ್ ಮುಂಭಾಗ ಜಖಂಗೊಂಡಿದೆ ಎಂದು ಪ್ರಭಾರಿ ಇನ್ಸ್‌ಪೆಕ್ಟರ್ ಬಾರ್ಕೋಟ್ ಗಜೇಂದ್ರ ಬಹುಗುಣ ಹೇಳಿದ್ದಾರೆ.
ಇದನ್ನೂ ಓದಿ: ಸಂಬಲ್ಪುರದಲ್ಲಿ ಪಾಳುಬಾವಿಗೆ ಬಿದ್ದ ಮರಿ ಆನೆ ರಕ್ಷಣೆ.. ವಿಡಿಯೋ